



ಡೈಲಿ ವಾರ್ತೆ: 12/MAY/2025


ಕೋಟ| ಇ.ಸಿ.ಆರ್. ಕಾಲೇಜಿನಲ್ಲಿ: ಎ.ಐ. ತಂತ್ರಜ್ಞಾನ ಶಿಕ್ಷಣ ವ್ಯವಸ್ಥೆ ಲೋಕಾರ್ಪಣೆ

ಕೋಟ: ಅಚ್ಲಾಡಿಯ ಇ.ಸಿ.ಆರ್. ಕ್ಯಾಂಪಸ್‌ನಲ್ಲಿ ಕಾರ್‍ಯನಿರ್ವಹಿಸುತ್ತಿರುವ ಇ.ಸಿ.ಆರ್. ಗ್ರೂಪ್ ಸಂಸ್ಥೆ ರಾಜ್ಯದಲ್ಲೇ ಅಪರೂಪವೆಂಬಂತೆ ಪರಿಚಯಿಸಿದ ಎ.ಐ.
ರೋಬೋಟಿಕ್ ಟೀಚರ್ ಶಿಕ್ಷಣ ವ್ಯವಸ್ಥೆಯ ಲೋಕಾರ್ಪಣೆ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳ
ಪ್ರಮಾಣವಚನ ಕಾರ್ಯಕ್ರಮ ಮೇ 12ರಂದು ಕಾಲೇಜು ವಠಾರದಲ್ಲಿ ಜರಗಿತು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ರೋಬೋಟಿಕ್ ಟೀಚರ್ ವ್ಯವಸ್ಥೆ ಲೋಕಾರ್ಪಣೆಗೊಳಿಸಿ
ಮಾತನಾಡಿ, ಶಿಕ್ಷಣ ಎನ್ನುವಂತದ್ದು ಕಾಲ-ಕಾಲಕ್ಕೆ ರೂಪಂತರಗೊಳ್ಳಬೇಕು.
ಅದೇ ರೀತಿ ಪ್ರಸ್ತುತ ಕಾಲಘಟ್ಟದಲ್ಲಿ ಎ.ಐ. ತಂತ್ರಜ್ಞಾನ ಅತ್ಯಂತ ಅಗತ್ಯವಾಗಿದ್ದು ಇದರಿಂದ
ವಿದ್ಯಾರ್ಥಿಗಳಿಗೆ ಸಾಕಷ್ಟು ಪ್ರಯೋಜನವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಮಧು ಭಾಸ್ಕರ್ ಮಾತನಾಡಿ, ಶಿಕ್ಷಣ ವ್ಯವಸ್ಥೆಯಲ್ಲಿ ಎ.ಐ. ತಂತ್ರಜ್ಞಾನ ಅತ್ಯಂತ
ಅಪರೂಪವಾಗಿದ್ದು ನಮ್ಮ ಸಂಸ್ಥೆಯಲ್ಲಿ ಇದನ್ನು ಹಳೆ ವಿದ್ಯಾರ್ಥಿಯೋರ್ವರ ಸಹಕಾರದಲ್ಲಿ
ರೂಪುಗೊಳಿಸಲಾಗಿದೆ. ಇದರ ಮೂಲಕ ವಿದ್ಯಾರ್ಥಿಗಳ ಎಲ್ಲ ಸಮಸ್ಯೆಗಳಿಗೆ ಉತ್ತರ ಪಡೆಯಬಹುದು ಹಾಗೂ ಶಿಕ್ಷಣ ವ್ಯವಸ್ಥೆಯ ಉನ್ನತ ತಂತ್ರಜ್ಞಾನಕ್ಕೆ ಇದು ಸಾಕ್ಷಿಯಾಗಲಿದ ಎಂದರು.
ಈ ಸಂದರ್ಭ ನರ್ಸಿಂಗ್ ವಿದ್ಯಾರ್ಥಿಗಳ ಪ್ರಮಾಣವಚನ ಕಾರ್ಯಕ್ರಮ ನಡೆಯಿತು.
ರೋಬೋಟಿಕ್ ವ್ಯವಸ್ಥೆಯನ್ನು ರೂಪುಗೊಳಿಸಿದ ಸಾಗರ್ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿದರು.
ಆಶ್ರಿತ ನರ್ಸಿಂಗ್ ಕಾಲೇಜು ಆಡಳಿತ ಮಂಡಳಿ ಟ್ರಸ್ಟಿ ಡಾ.ವಿದ್ಯಾಧರ ಶೆಟ್ಟಿ, ಲಯನ್ಸ್ ಕ್ಲಬ್ ಗವರ್ನರ್ ಸ್ವಪ್ನಾ ಸುರೇಶ್, ಕಾಲೇಜು ಆಡಳಿತ ಮಂಡಳಿ ಟ್ರಸ್ಟಿ ಬಾಲಕೃಷ್ಣ ಶೆಟ್ಟಿ, ಉದ್ಯಮಿ ಕೆ.ಪಿ. ಶೇಖರ್ ಕಾರ್ಕಡ,
ಡೈರೆಕ್ಟರ್ ನಿವೇದಾ ಪ್ರಭಾ, ಪ್ರಾಂಶುಪಾಲೆ ಸುಜಾತ ಬೋರ್ಕರ್, ಪ್ರಾಂಶುಪಾಲ ಡಾ.ನೀಲೇಶ್, ಉಪಪ್ರಾಂಶುಪಾಲ ಅಶೋಕ್ ಜೋಗಿ ಇದ್ದರು.