



ಡೈಲಿ ವಾರ್ತೆ: 17/MAY/2025


ಕುಂದಾಪುರ| ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದ ಕಾರು – ಪ್ರಯಾಣಿಕರು ಪಾರು!

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದ ಘಟನೆ ಶನಿವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ 66ರ ಹಂಗಳೂರು ಮಸೀದಿ ಬಳಿ ಸಂಭವಿಸದೆ.
ಕೇರಳ ಕಾಸರಗೋಡು ಕುಟುಂಬವೊಂದು ಕೊಲ್ಲೂರು ದೇವರ ದರ್ಶನ ಪಡೆದು ಕಾಸರಗೋಡು ಗೆ ವಾಪಸು ಹೋಗುವ ಸಂದರ್ಭ ಕುಂದಾಪುರದ ಹಂಗಳೂರು ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ನಿಂತಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಯಾಗಿಲ್ಲ.
ಕುಂದಾಪುರ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕಾಗಿಮಿಸಿ ಪರಿಶೀಲಿಸಿದ್ದಾರೆ.