



ಡೈಲಿ ವಾರ್ತೆ: 20/MAY/2025


ಮಹಾಲಕ್ಷ್ಮಿ ಬ್ಯಾಂಕ್ ಗೋಲ್ ಮಾಲ್ ಬಗ್ಗೆ ಮೌನ -ಸಮಯ ಸಾಧಕ ಮಧ್ವರಾಜ್ ಗೆ ಆಲಿಂಗನ-ಸಚಿವ ಮಾಂಕಾಳ್ ನಡೆಗೇ ಕೋಟ ನಾಗೇಂದ್ರ ಪುತ್ರನ್ ಆಕ್ರೋಶ!


ಕೋಟ: ಅಸಂಖ್ಯಾತ ಮೀನುಗಾರರಿಗೆ ನಂಬಿಕೆ ದ್ರೋಹ ಮಾಡಿ ಸಾಲು ಸಾಲು ಹಗರಣಗಳಲ್ಲಿ ಕೋಟ್ಯಾಂತರ ರೂಪಾಯಿ ಮುಂಡಾ ಮೋಚಿರುವ ಮಹಾಲಕ್ಷ್ಮಿ ಬ್ಯಾಂಕಿನ ವಿರುದ್ಧ ಪಾರದರ್ಶಕ ತನಿಖೆಗೆ ಅಗ್ರಹಿಸಿ ಹೋರಾಟಗಳು ನಡೆಯುತ್ತಿದ್ದರೂ ಮಹಾಲಕ್ಷ್ಮಿ ಬ್ಯಾಂಕ್ ನ ಗೋಲ್ ಮಾಲ್ ಬಗ್ಗೆ ಚಕಾರ ಎತ್ತದ ಮೀನುಗಾರಿಕಾ ಸಚಿವ ಮಾಂಕಾಳು ವೈದ್ಯ ಅವರು ಕಾಂಗ್ರೆಸ್ ನ ಮಾಜಿ ಸಚಿವ ಹಾಗೂ ಇದೀಗ ಬಿಜೆಪಿ ಸೇರಿ ತನ್ನ ಅಸ್ತಿತ್ವ ಕ್ಕಾಗಿ ಬಿಜೆಪಿ ಯಲ್ಲಿಯೇ ತಡಕಾಡುವ ಸ್ಥಿತಿಯಲ್ಲಿರುವ ಪ್ರಮೋದ್ ಮಧ್ವರಾಜ್ ರನ್ನು ಭೇಟಿ ಮಾಡಿ ಆಪ್ತ ಸಮಾಲೋಚನೆ ನಡೆಸಿರುವ ಬಗ್ಗೆ ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಆತಂಕ ಹಾಗೂ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಬ್ಯಾಂಕಿಲ್ಲಿ ನಡೆದಿರುವ ಲೂಟಿಯಲ್ಲಿ ಉಡುಪಿ ಬಿಜೆಪಿ ಶಾಸಕರ ನೇರ ಕೈವಾಡವಿರುವುದು ಎಲ್ಲರಿಗೂ ತಿಳಿದ ವಿಷಯ ವಾಗಿದೆ.
ಹಗರಣದ ತನಿಖೆ ಬಗ್ಗೆ ಸರಿ ಸುಮಾರು ಒಂದು ವರ್ಷದಿಂದ ಹೋರಾಟ ಮಾಡುತ್ತಾ ಇದ್ದೇವೆ, ಜಯಪ್ರಕಾಶ್ ಹೆಗ್ಡೆ, ಪ್ರಸಾದ್ ಕಾಂಚನ್, ರಮೇಶ್ ಕಾಂಚನ್ ರಂತಹ ಬೆರಳೆಣಿಕೆಯಷ್ಟು ಕಾಂಗ್ರೆಸ್ ನಾಯಕರು ಬಿಟ್ಟರೆ ಇತರ ಜಿಲ್ಲಾ ಕಾಂಗ್ರೆಸ್ ನಾಯಕರು, ರಾಜ್ಯ ನಾಯಕರು ಮಹಾಲಕ್ಷ್ಮಿ ಬಗ್ಗೆ ಗಾಢ ಮೌನದಲ್ಲಿ ಇರುವುದು ಒಂದೆಡೆ ಕಾಂಗ್ರೆಸ್ ಕಾರ್ಯಕರ್ತರ ಪಕ್ಷ ನಿಷ್ಠೆಗೆ, ಹುಮ್ಮಸ್ಸಿಗೆ ತಣ್ಣೀರು ಎರಚುವಂತಿದೆ. ಮತ್ತೊಂದೆಡೆ ಬಿಜೆಪಿ ಶಾಸಕನಿಗೆ ವರವಾಗಿ ಪರಿಣಮಿಸಿದಂತಿದೆ.
ಬ್ಯಾಂಕ್ ಮೇಘಾ ಹಗರಣದ ಬಗ್ಗೆ ಧ್ವನಿ ಎತ್ತಿರುವ ನಮ್ಮನ್ನು ಬೇರೆ ಬೇರೆ ರೀತಿಯಲ್ಲಿ ತೇಜೋವದೆ ಮಾಡಲಾಗುತ್ತಿದ್ದು, ಹೋರಾಟದ ಬಲವನ್ನು ಹತ್ತಿಕ್ಕುವ ಯತ್ನ ನಡೆಯುತ್ತಿದೆ.
ಇಂತಹ ಸಂದರ್ಭದಲ್ಲಿ ಮೀನುಗಾರಿಕಾ ಸಚಿವನಾಗಿ ಮಹಾಲಕ್ಷ್ಮಿ ಬ್ಯಾಂಕ್ ನ ಕೋಟಿ ಕೋಟಿ ಲೂಟಿ ಬಗ್ಗೆ ಮೀನುಗಾರರ ಪರ ದ್ವನಿ ಎತ್ತಿ ಹೋರಾಟಗಾರರಿಗೆ ಬಲ ತುಂಬ ಬೇಕಾಗಿದ್ದ ಕರ್ನಾಟಕ ಸರ್ಕಾರದ ಮೀನುಗಾರಿಕಾ ಸಚಿವ ಮಾಂಕಾಳು ವೈದ್ಯ ಉಡುಪಿ ಬಿಜೆಪಿ ಶಾಸಕ ಹಾಗೂ ಬಿಜೆಪಿ ನಾಯಕರಿಗೆ ಕೊಡೆ ಹಿಡಿದು ನಿಂತಿದ್ದಾರೆ.
ಒಂದು ವೇಳೆ ಇಂತಹ ಬ್ಯಾಂಕ್ ಗೋಲ್ ಮಾಲ್ ಕಾಂಗ್ರೆಸ್ ಶಾಸಕರಿಂದ, ನಾಯಕರಿಂದ ನಡೆಯುತ್ತಿದ್ದರೆ ಬಿಜೆಪಿ ಯವರು ಇವರನ್ನು ಇಷ್ಟೊತ್ತಿಗೆ ಅಡ್ಡಡ್ಡ ನುಂಗಿ ಹಾಕುತ್ತಿದ್ದರು. ಇದನ್ನು ಅರ್ಥ ಮಾಡಿಕೊಳ್ಳದೆ ಮತ್ತೆ ಮತ್ತೆ ಅವರ ಸಖ್ಯ ಸಾಧಿಸಿ ಕಾಂಗ್ರೆಸ್ ಕಾರ್ಯಕರ್ತರನ್ನು ಕಡೆಗಣಿಸುತ್ತಿರುವ ಕಾಂಗ್ರೆಸ್ ಸಚಿವರ, ನಾಯಕರ ವರ್ತನೆ ಮುಂದೆ ಇನ್ನೂ ದುಬಾರಿಯಾಗಿ ಪರಿಣಮಿಸಬಹುದು.

ಮಾನ್ಯ ಸಚಿವ ಮಾಂಕಾಳರೇ…ನೀವು ಕಾರ್ಯಕರ್ತರು ಹಾಗೂ ಪಕ್ಷ ಬಲಪಡಿಸಲು ಉಡುಪಿಗೆ ಬನ್ನಿ ಬಿಜೆಪಿ ಶಾಸಕ ಹಾಗೂ ಬಿಜೆಪಿ ನಾಯಕರನ್ನು ಸೆಳೆಯಲು ನೀವು ಉಡುಪಿಗೆ ಬರುವುದು ಬೇಡ, ನೀವು ಉಡುಪಿಗೆ ಬಂದು ಬಿಜೆಪಿ ನಾಯಕರ ಕಾಲಿಗೆ ಬಿದ್ದರೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ತಲೆತಗ್ಗಿಸುವ ಪರಿಸ್ಥಿತಿ ತಂದಿದ್ದೀರಿ, ನಿಮಗೆ ಸಾಧ್ಯ ಆದರೆ ನಿಮ್ಮ ಮೀನುಗಾರಿಕೆ ಇಲಾಖೆಯಲ್ಲಿ ಆಗಿರುವ ಅಕ್ರಮವನ್ನು ತನಿಖೆಗೆ ಕ್ರಮ ಕೈಗೊಳ್ಳಿ ನಾನು ನಾಳೆಯೇ ನಿಮ್ಮ ಕೈಗೆ ದಾಖಲೆ ಕೊಡುತ್ತೇನೆ, ಅದನ್ನು ತನಿಖೆ ಮಾಡಿಸಿ ಮೀನುಗಾರರಿಗೆ ಹಾಗೂ ಸಾರ್ವಜನಿಕರಿಗೆ ನ್ಯಾಯ ಕೊಡಿಸಿ. ಕೋಟ ನಾಗೇಂದ್ರ ಪುತ್ರನ್ ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷರು ಮೀನುಗಾರಿಕಾ ಸಚಿವ ಮಾಂಕಾಳ್ ವೈದ್ಯ ವಿರುದ್ದ ಬೇಸರ ವ್ಯಕ್ತ.