ಡೈಲಿ ವಾರ್ತೆ: 21/MAY/2025

ಮಡಿಲು ಸೇವಾ ತಂಡದಿಂದ ಗ್ರಾಮೀಣ ಭಾಗದ ಆಯ್ದ ವಿದ್ಯಾರ್ಥಿಗಳಿಗೆ 5ನೇ ವರ್ಷದ ಪುಸ್ತಕ ವಿತರಣೆ

ಮಂಗಳೂರು: ಮಡಿಲು ಸೇವಾ ತಂಡದಿಂದ ಗ್ರಾಮೀಣ ಭಾಗದ ಆಯ್ದ ವಿದ್ಯಾರ್ಥಿಗಳಿಗೆ 5ನೇ ವರ್ಷದ ಪುಸ್ತಕ ವಿತರಣಾ ಕಾರ್ಯಕ್ರಮವು ಅಳಪೆಯ ನಾಗಬ್ರಹ್ಮ ರಕ್ತೇಶ್ವರಿ ಸಭಾಭವನದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಜ್ಞಾನಾಶ್ರಮದ ಸೋನು ಶ್ರೀನಿವಾಸ್ ಅಜ್ಜನಹಳ್ಳಿ ಭಾಗವಹಿಸಿ ಧಾರ್ಮಿಕ ಪ್ರವಚನ ನೀಡಿ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿ ತಮ್ಮ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ನೀಡುವುದರ ಜೊತೆಗೆ ದೇಶದ ಸಂಸ್ಕತಿ ಹಾಗೂ ನಡೆನುಡಿಯನ್ನು ಪಾಲಿಸುವಂತೆ ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭ ವೇದಿಕೆಯಲ್ಲಿ ಕೊರ್ದಬ್ಬು ದೈವಸ್ಥಾನದ ಮೊಕ್ತೇಸರರಾದ ನಾರಾಯಣ ಶೆಟ್ಟಿ , ಉದ್ಯಮಿ ಗಣೇಶ್ ಕೆ.ಟಿ, ಉದ್ಯಮಿ ಜಗದೀಶ್ ಕೆ, ನಿವೃತ್ತ ಶಿಕ್ಷಕಿ ಮೀನಾಕ್ಷಿ , ಕೊಡಕ್ಕಲ್ ವೈದ್ಯನಾಥ ದೇವಸ್ಥಾನದ ಮಾಜಿ ಮೊಕ್ತೇಸರರಾದ ಗೋಪಾಲ ಪೂಜಾರಿ ಉದ್ಯಮಿ ಪ್ರಕಾಶ್ ನಾಯಕ್, ಮಡಿಲು ಸೇವಾ ತಂಡದ ಗೌರವ ಅಧ್ಯಕ್ಷರಾದ ಪುಷ್ಪಲತಾ ಸುವರ್ಣ, ಅಧ್ಯಕ್ಷರಾದ ಗಜೇಂದ್ರ ಪೂಜಾರಿ ಉಪಸ್ಥಿತರಿದ್ದರು.

ಉಷಾ ವಿಶ್ವನಾಥ್ ಸ್ವಾಗತಿಸಿದರು, ಕೆ. ಪಿ ಬಾಲಚಂದ್ರ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಸಲ್ಲಿಸಿದರು.
ಒಟ್ಟು 50000 ರೂಪಾಯೀ ಮೌಲ್ಯದ ಪುಸ್ತಕಗಳನನ್ನು ವಿತರಿಸಲಾಯಿತು..