



ಡೈಲಿ ವಾರ್ತೆ: 21/MAY/2025


ಪಾಂಡೇಶ್ವರದಲ್ಲಿ ಗ್ರಾಮೀಣ ಬೇಸಿಗೆ ಶಿಬಿರ ಸಮಾರೋಪ
ಮೊಬೈಲ್ ಗೀಳಿನಿಂದ ಹೊರಬರಲು ಬೇಸಿಗೆ ಶಿಬಿರಗಳ ಸಹಕಾರಿ – ಅಧ್ಯಕ್ಷೆ ಸುಶೀಲ ಸದಾನಂದ ಪೂಜಾರಿ

ಕೋಟ: ಇಂದಿನ ಕಾಲದಲ್ಲಿ ಮಕ್ಕಳು ಹೆಚ್ಚು ಮೊಬೈಲ್ ಬಳಸುತ್ತಿದ್ದು ಅದರ ಗೀಳಿನಿಂದ ಹೊರಬರಲು ಬೇಸಿಗೆ ಶಿಬಿರಗಳ ಸಹಕಾರಿ ಎಂದು ಪಾಂಡೇಶ್ವರ
ಗ್ರಾಮಪಂಚಾಯತ್ ಅಧ್ಯಕ್ಷೆ ಸುಶೀಲ ಸದಾನಂದ ಪೂಜಾರಿ ನುಡಿದರು.
ಬುಧವಾರ ಪಾಂಡೇಶ್ವರ ಗ್ರಾಮಪಂಚಾಯತ್ ಹಾಗೂ ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಇವರುಗಳ ಸಹಭಾಗಿತ್ವದಡಿ 15ರಿಂದ 21ರ ತನಕ ನಡೆದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಎಷ್ಟೋ ಮಕ್ಕಳಲ್ಲಿ ಪ್ರತಿಭೆಗಳು ಮರಿಚಿಕೆಯಾಗಿ ಉಳಿಯುತ್ತದೆ ಇದಕ್ಕೆ ಗ್ರಾಮೀಣ ಶಿಬಿರಗಳು ಅತ್ಯಂತ ಪರಿಣಾಮಕಾರಿಯಾಗಿದೆ. ಶಿಬಿರಗಳ ಜತೆ ಪರಿಸರ ಜಾಗೃತಿ ಹೊಂದಬೇಕು ಎಂದರು.
ಮುಖ್ಯ ಅಭ್ಯಾಗತರಾಗಿ ಪಂಚಾಯತ್ ಉಪಾಧ್ಯಕ್ಷ ವೈ ಬಿ ರಾಘವೇಂದ್ರ, ಅಭಿವೃದ್ಧಿ ಅಧಿಕಾರಿ ಲೋಲಾಕ್ಷಿ, ಸದಸ್ಯರಾದ ಸುಜಾತ ವೆಂಕಟೇಶ್ ಪೂಜಾರಿ, ಸಂಜೀವಿನಿ ಒಕ್ಕೂಟದ ಎಂಬಿಕೆ ಉಷಾ ಗಣೇಶ್ ಪೂಜಾರಿ, ವಿಆರ್ ಡಬ್ಲೂ÷್ಯ ಶಾಂತಿ ಉಪಸ್ಥಿತರಿದ್ದರು.

ವಿವಿಧ ರೀತಿಯ ತರಬೇತಿ,ಸ್ಪರ್ಧೆ,ಬಹುಮಾನ ವಿತರಣೆ
ಕಾರ್ಯಕ್ರಮದಲ್ಲಿ ವಿವಿಧ ತಂಡಗಳಿಗೆ ಸ್ಪರ್ಧೆ ಏರ್ಪಡಸಿದ್ದು ಹೆಚ್ಚು ಅಂಕ ಪಡೆದ ತಂಡಗಳಿಗೆ ಗಿಡ ನೀಡುವ ಮೂಲಕ ಪರಿಸರಸ್ನೇಹಿ ಬಹುಮಾನಗಳನ್ನು ನೀಡಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಅರ್ಪಿತಾ ಬ್ರಹ್ಮಾವರ ಕಲಾಕೃತಿ ರಚನೆ, ಪಜ್ಞಾ ಜಿ.ಪೂಜಾರಿ ಚಿತ್ರಕಲೆ ,ರಾಘವೇಂದ್ರ ವಿವಿಧ ಸ್ಪರ್ಧೆ ರಸಪ್ರಶ್ನೆ,,ನಟರಾಜ್ ಕರಾಟೆ ವಿವಿಧ ತರಹದ ಚಟುವಟಿಗೆಗಳ ಬಗ್ಗೆ,ಅನಿತಾ ನರೇಂದ್ರ ಕುಮಾರ್ ಕೋಟ ನಾಯಕತ್ವದ ಕುರಿತು ,ಪೂಣ ðಮಾ ಸುನಿಲ್ ಕ್ರಾಫ್ಟ್ ಶಿಭಿರಾರ್ಥಿ ತರಬೇತಿ ನೀಡಿದರು.
ಕಾರ್ಯಕ್ರಮವನ್ನು ಗ್ರಂಥಪಾಲಕಿ ಜ್ಯೋತಿ ಪೂಜಾರಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.