ಡೈಲಿ ವಾರ್ತೆ: 26/MAY/2025

ಕುಂದಾಪುರ| ಜಯಾನಂದ ಖಾರ್ವಿ ಹೃದಯಾಘಾತದಿಂದ ಮೃತ್ಯು!

ಕುಂದಾಪುರ: 1980-90 ರ ದಶಕದ ರಾಜ್ಯದ ಮುಂಚೂಣಿ ಕರಾವಳಿಯ ಲೆಜೆಂಡ್ ಆಟಗಾರ, ಸಂಘಟಕ, ಜಯಾನಂದ ಖಾರ್ವಿ (60) ಕುಂದಾಪುರ ಇಂದು ಮುಂಜಾನೆ ಹೃದಯಾಘಾತದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.

ಮೃತರು ಹೆಂಡತಿ ಮತ್ತು ಇಬ್ಬರು ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.