ಡೈಲಿ ವಾರ್ತೆ: 27/MAY/2025

ಬಿ.ಸಿ.ರೋಡು| ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಚಾಲಕ ಸ್ಥಳದಲ್ಲೇ ಮೃತ್ಯು

ಬಂಟ್ವಾಳ : ಕಾರೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಬಿ.ಸಿ.ರೋಡು ಸಮೀಪದ ಕೈಕಂಬ ಬಳಿ ಮಂಗಳವಾರ ಮುಂಜಾನೆ 4 ಗಂಟೆಯ ವೇಳೆ ನಡೆದಿರುವ ಬಗ್ಗೆ ವರದಿಯಾಗಿದೆ.

ಮೃತನನ್ನು ಮಂಚಿ ಗ್ರಾಮದ ಭಂಡಾರಕೊಟ್ಟಿಗೆ ‌ನಿವಾಸಿ ಜಯಂತ ಗೌಡ @ ಜಯರಾಮ ಎಂದು ಗುರುತಿಸಲಾಗಿದೆ.

ಇವರು ತುಂಬೆ ಖಾಸಗಿ ಆಸ್ಪತ್ರೆಯ ಕ್ಯಾಂಟೀನ್ ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದು, ಇಂದು ಮುಂಜಾನೆ ಮನೆಯಿಂದ ಕೆಲಸಕ್ಕೆ ತುಂಬೆಗೆ ಹೋಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.