ಡೈಲಿ ವಾರ್ತೆ: 29/MAY/2025

ಬೈಂದೂರು| ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್‌ ವಾಹನ ಪಲ್ಟಿ!

ಬೈಂದೂರು: ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ವಾಹನವೊಂದು ಪಲ್ಟಿಯಾದ ಘಟನೆ ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಒತ್ತಿನೆಣೆಯ ತಿರುವಿನಲ್ಲಿ ಸಂಭವಿಸಿದೆ.

ಟಾಟಾ ಏಸ್‌ ವಾಹನವು ಭಟ್ಕಳದಿಂದ ಕುಂದಾಪುರ ಕಡೆ ಹೋಗುತ್ತಿದ್ದ ವೇಳೆ ಬೈಂದೂರಿನ ಒತ್ತಿನೆಣೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಚಾಲಕ ಹಾಗೂ ಮತ್ತೊರ್ವ ಸಣ್ಣ ಪುಟ್ಟ ಗಾಯದೊಂದಿಗೆ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಬೈಂದೂರು ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಐಆರ್‌ ಬಿ ಕಂಪೆನಿಯ ಕ್ರೇನ್ ಸಹಾಯದಿಂದ ವಾಹನವನ್ನು ರಸ್ತೆಯ ಎಡಬದಿಯಲ್ಲಿ ನಿಲ್ಲಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಈ ಕುರಿತು ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.