ಡೈಲಿ ವಾರ್ತೆ: 31/MAY/2025

ಬೆಳ್ಳಂಬೆಳಗ್ಗೆ ಕಾರ್ಕಳದ ಮೆಸ್ಕಾಂ ಇಲಾಖೆಯ ಉದ್ಯೋಗಿಯ ಮನೆ,ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳಿಂದ ದಿಢೀರ್ ದಾಳಿ

ಕಾರ್ಕಳ: ಕಾರ್ಕಳದ ಮೆಸ್ಕಾಂ ಇಲಾಖೆಯ ಉದ್ಯೋಗಿಯ ಕಚೇರಿ, ನಿವಾಸ ಮತ್ತು ಹೊಟೇಲ್ ಗಳಿಗೆ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಸರ್ಕಾರಿ ಅಧಿಕಾರಿಗಳ ವಿರುದ್ಧ ಆಸ್ತಿ ಅಸಮತೋಲನ ಪ್ರಕರಣಗಳ ತನಿಖೆಯ ಭಾಗವಾಗಿ ಈ ದಾಳಿ ನಡೆದಿದೆ ಎನ್ನಲಾಗಿದೆ.

ಬೈಪಾಸ್ ರಸ್ತೆಯ ಪುಲ್ಕೇರಿ ಬಳಿಯಲ್ಲಿ ಇರುವ ಹೊಟೇಲ್ ಹಾಗೂ ನಿವಾಸಕ್ಕೆ ದಾಳಿ ನಡೆದಿದೆ ಎಂಬುವುದು ತಿಳಿದುಬಂದಿದೆ.