ಡೈಲಿ ವಾರ್ತೆ: 06/JUNE/2025

ಉದ್ಯಾವರ| ಚಾಲಕನ ನಿಯಂತ್ರಣ ತಪ್ಪಿ ಡಿವೈಡ‌ರ್ ಮೇಲೇರಿದ ಕಾರು – ಪ್ರಯಾಣಿಕರು ಪಾರು!

ಕಾಪು: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡ‌ರ್ ಮೇಲೇರಿದ ಘಟನೆ ಜೂ.6ರ ಶುಕ್ರವಾರ ಬೆಳಿಗ್ಗೆ ರಾ.ಹೆ. 66ರ ಉದ್ಯಾವರ ಕಿಯಾ ಶೋರೂಮ್ ಬಳಿ ಸಂಭವಿಸಿದೆ.

ಕಾರು ಮಂಗಳೂರಿನಿಂದ ಉಡುಪಿ ಕಡೆ ತೆರಳುತ್ತಿತ್ತು ಎನ್ನಲಾಗಿದೆ. ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಡಿವೈಡ‌ರ್ ಮೇಲಿನ ಕ್ರಾಶ್ ಗಾರ್ಡ್ ಸಹಿತ ಕಾರು ನಜ್ಜು ಗುಜ್ಜಾಗಿದ್ದು ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ.