ಡೈಲಿ ವಾರ್ತೆ: 12/JUNE/2025

ಕುಂದಾಪುರ: ಆಶಾ ಕಾರ್ಯಕರ್ತೆಯರ ಉಡುಪಿ ಜಿಲ್ಲಾ ಯೂನಿಯನ್ ಅಧ್ಯಕ್ಷೆ ಸುಹಾಸಿನಿ ಶೆಟ್ಟಿಯವರಿಗೆ ಜೆಸಿ‌ಐ ಕುಂದಾಪುರ ಸಿಟಿ ಇವರಿಂದ ಸನ್ಮಾನ

ಕುಂದಾಪುರ: ಆಶಾ ಕಾರ್ಯಕರ್ತೆಯರ ಉಡುಪಿ ಜಿಲ್ಲಾ ಯೂನಿಯನ್ ಅಧ್ಯಕ್ಷರಾದ ಸುಹಾಸಿನಿ ಶೆಟ್ಟಿಯವರಿಗೆ ಜೆಸಿ‌ಐ ಕುಂದಾಪುರ ಸಿಟಿ ಇವರಿಂದ ಸನ್ಮಾನ ಕಾರ್ಯಕ್ರಮವು ಕೋಟೇಶ್ವರದ ಸಹನಾ ಹೋಟೆಲ್ ನ ಸುಮೇಧ ಹಾಲ್ ನಲ್ಲಿ ನಡೆಯಿತು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಜೆಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷ ರಾದ ಯೂಸುಫ್ ಸಲೀಮ್ ವಹಿಸಿದರು.

ಮುಖ್ಯ ಅತಿಥಿಯಾಗಿ ವಲಯ 15 ರ ವಲಯಧ್ಯಕ್ಷ ಅಭಿಲಾಶ್ ಬಿ ಏ, ಜೆಸಿಐ ಕುಂದಾಪುರ ಸಿಟಿ ಯಾ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ಪೂರ್ವ ಅಧ್ಯಕ್ಷರಾದ ಕೆ ಕಾರ್ತಿಕೆಯ ಮಧ್ಯಸ್ಥ , ರಾಘವೇಂದ್ರ ಚರಣ್ ನಾವಡ, ಜಯಚಂದ್ರ ಶೆಟ್ಟಿ, ನಾಗೇಶ್ ನಾವಡ, ವಿಜಯ ಭಂಡಾರಿ, ಚಂದ್ರಕಾಂತ್, ಮಂಜುನಾಥ್ ಕಾಮತ್ ಡಾ ಸೋನಿ ನಿಕಟ ಪೂರ್ವ ಅಧ್ಯಕ್ಷ ರಾಘವೇಂದ್ರ ಕುಲಾಲ್, ಕಾರ್ಯದರ್ಶಿ ಕಿರಣ್ ದೇವಾಡಿಗ, ಸದ್ಯಸ್ಯರಾದ ಕತಿಜಾ ಸಲೀಮ್,ಲೇಡಿ ಜೇಸಿ ಸಂಯೋಜಕಿ ಶೈಲಾ, ಯುವ ಜೇಸಿ ಸಂಯೋಜಕಿ ಸುಮೇಧಾ ಮೆಂಡನ್ ಇನ್ನಿತರರು ಉಪಸ್ಥಿತರಿದ್ದರು.