
ಡೈಲಿ ವಾರ್ತೆ: 29/JUNE/2025
ಭಕ್ತರು ಕಳೆದುಕೊಂಡ ಚಿನ್ನವನ್ನು ದೊರೆಕಿಸಿ ಮತ್ತೆ ತನ್ನ ಪವಾಡವನ್ನು ತೋರಿಸಿದ ಸಾಸ್ತಾನದ ಕಳಿಬೈಲು ಕೊರಗಜ್ಜ.!

ಕೋಟ: ಈಗಾಗಲೇ ಹಲವು ಪವಾಡಗಳ ಮೂಲಕ ನಂಬಿದವರ ಬೆಂಬಿಡದೆ ಇಷ್ಟಾರ್ಥ ನೆರವೇರಿಸಿದ ಕಳಿಬೈಲು ಕೊರಗಜ್ಜ ಇದೀಗ ಬೈಂದೂರಿನ ಕುಟುಂಬವೊಂದಕ್ಕೆ ತನ್ನ ಕೃಪಾ ಕಟಾಕ್ಷವನ್ನು ಬೀರಿದ್ದಾನೆ.

ಬೈಂದೂರು ತಾಲೂಕಿನ ಉಳ್ಳೂರಿನ ಕುಟುಂಬವೊಂದು ಕೊರಗಜ್ಜನ ಅನನ್ಯ ಭಕ್ತರು.
ಒಮ್ಮೆ ಈ ಕುಟುಂಬದ ಮಹಿಳೆಯೋರ್ವರು ಬಹು ಬೆಲೆಬಾಳುವ ಚಿನ್ನದ ಬ್ರೈಸೆಲೆಟ್ಸ್ ಅನಿರೀಕ್ಷಿತವಾಗಿ ಬೇರೆಯವರ ಚಿನ್ನ ದೊಂದಿಗೆ ಕೈ ತಪ್ಪಿ ಹೋಗಿ ಎಲ್ಲಿ ಹುಡುಕಾಡಿದರೂ ಬ್ರೈಸೆಲೆಟ್ಸ್ ಪತ್ತೆಯಾಗದೆ ಸುಮಾರು ಒಂದು ತಿಂಗಳಿಂದ ಚಿಂತೆಯಲ್ಲಿ ಮುಳುಗಿದ್ದರು.
ಆಗ ಸ್ಮರಣೆಗೆ ಬಂದದ್ದು ಕಳಿಬೈಲ್ ಕೊರಗಜ್ಜ.
ಆ ಮಹಿಳೆ ಅನನ್ಯ ಭಕ್ತಿಯಿಂದ ಕೊರಗಜ್ಜನನ್ನು ನೆನದು
ಕೊರಗಜ್ಜ ನೀನೇ ಗತಿ ಎಂದು ಬೇಡಿದ ಕುಟುಂಬಕ್ಕೆ ಪವಾಡ ಸದೃಷ ರೀತಿಯಲ್ಲಿ ಬೇರೆಯವರ ಕೈ ಸೇರಿದ್ದ ಚಿನ್ನದ ಬ್ರೈಸೆಲೆಟ್ಸ್ ಮಹಿಳೆಗೆ ಹಿಂದಿರುಗಿಸಿ ಕೊಟ್ಟರು.
ಕೊರಗಜ್ಜನ ಮಹಿಮೆಗೆ ಭಾವ ಪರಶವಾದ ಮಹಿಳೆಯ ಕುಟುಂಬ ಕಳಿಬೈಲಿಗೆ ಬಂದು ಹರಕೆ ತೀರಿಸಿ ಕೊರಗಜ್ಜ ಮತ್ತು ಪರಿವಾರ ದೈವ ದೇವರುಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.