



ಡೈಲಿ ವಾರ್ತೆ: 01/ಜುಲೈ/2025


ಎಕ್ಸಲೆಂಟ್ ಪಿಯು ಕಾಲೇಜ್ ಸುಣ್ಣಾರಿಯಲ್ಲಿ CA, CS ಹಾಗೂ CMA ಫೌಂಡೇಶನ್ಸ್ ಕ್ಲಾಸ್ ಗಳ ಉದ್ಘಾಟನೆ

ಕುಂದಾಪುರ: ಎಕ್ಸಲೆಂಟ್ ಪಿಯು ಕಾಲೇಜ್ ಸುಣ್ಣಾರಿಯಲ್ಲಿ CA, CS ಹಾಗೂ CMA ಫೌಂಡೇಶನ್ಸ್ ಕ್ಲಾಸ್ ಗಳ ಉದ್ಘಾಟನಾ ಸಮಾರಂಭವು ಜೂ.30 ರಂದು ಸೋಮವಾರ ಎಕ್ಸಲೆಂಟ್ ಪಿಯು ಕಾಲೇಜ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು CA, CS ಹಾಗೂ CMA ಫೌಂಡೇಶನ್ಸ್ ತರಬೇತುದಾರರಾದ ನಾಗೇಂದ್ರ ಭಕ್ತ ಉದ್ಘಾಟಿಸಿ ವಿದ್ಯಾರ್ಥಿಗಳ ಕಲಿಕೆ ಮತ್ತು ಸಂಸ್ಕಾರದ ಬಗ್ಗೆ ಮಾತನಾಡಿ ಅವರು ತೆಗೆದು ಕೊಳ್ಳುವ ಕೋರ್ಸ್ ಗಳನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಕ್ಸಲೆಂಟ್ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಎಂ. ಮಹೇಶ್ ಹೆಗ್ಡೆ ವಹಿಸಿದ್ದರು.
ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಒಂದು ಗುರಿ ಇರಬೇಕು. ಗುರಿ ಇದ್ದರೆ ಮಾತ್ರ ಮುಂದೆ ಬೆಳೆಯಲು ಸಾಧ್ಯ. ಅಲ್ಲದೆ ನಿಮ್ಮಲ್ಲಿ ಉತ್ತಮ ಸಂಸ್ಕೃತಿಯನ್ನು ಬೆಳೆಸಿಕೊಳ್ಳಿ ಅದರಿಂದ ಮುಂದೆ ನೀವು ಜೀವನದಲ್ಲಿ ಉತ್ತಮವಾದ ಮನುಷ್ಯರಾಗಿ ಬಾಳುತ್ತೀರಿ ಎಂದು ಹೇಳಿದರು.

ಎಕ್ಸಲೆಂಟ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಮಾತನಾಡಿ ಸಿಎ, ಸಿಎಸ್ ಹಾಗೂ ಸಿಎಂಎ ಇದರಲ್ಲಿ ವಿದ್ಯಾರ್ಥಿಗಳಿಗೆ ಇರಬೇಕಾದ ಶಿಸ್ತು ಮತ್ತು ಅದರ ನಿಭಾಯಿಸಲು ಬೇಕಾದ ಸಂಯಮಗಳ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಎಕ್ಸಲೆಂಟ್ ಹೈಸ್ಕೂಲ್‌ನ ಮುಖ್ಯೋಪಾಧ್ಯಾಯಿನಿ ಸರೋಜಿನಿ. ಪಿ. ಆಚಾರ್ಯ ಸ್ವಾಗತಿಸಿದರು.
ಎಕ್ಸಲೆಂಟ್ ಸಂಸ್ಥೆಯ ವಿದ್ಯಾರ್ಥಿಗಳಾಗದ ಪ್ರಣೀತ್ ಹಾಗೂ ಸುವಿತ್ ಕಾರ್ಯಕ್ರಮವನ್ನು ನಿರೂಪಿಸಿದರು.
ವಿದ್ಯಾರ್ಥಿನಿ ಚಿನ್ಮಯಿ ವಂದಿಸಿದರು.
ವಿದ್ಯಾರ್ಥಿಗಳಿಗೆ ಸಿಎ, ಸಿಎಸ್ ಹಾಗೂ ಸಿಎಂಎ ಫೌಂಡೇಶನ್ಸ್ ಮಾಹಿತಿಯನ್ನು ತರಬೇತುದಾರರಾದ ನಾಗೇಂದ್ರ ಭಕ್ತ ನೀಡಿದರು.