



ಡೈಲಿ ವಾರ್ತೆ: 02/ಜುಲೈ/2025


ಸುರತ್ಕಲ್: ಖಾಸಗಿ ಬಸ್ ಗಳೆರಡು ಮುಖಾಮುಖಿ ಡಿಕ್ಕಿ, ಹಲವರಿಗೆ ಗಾಯ (ಅಪಘಾತದ ವಿಡಿಯೋ ವೈರಲ್)

ಸುರತ್ಕಲ್: ಖಾಸಗಿ ಬಸ್ ಗಳೆರಡು ಮುಖಾಮುಖಿ ಡಿಕ್ಕಿ ಹೊಡೆದು ಹಲವರು ಗಾಯ ಗೊಂಡ ಘಟನೆ ಮಧ್ಯ ಮಾಧವನಗರದಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ಚೇಳೈರುನಿಂದ ಸುರತ್ಕಲ್ ಕಡೆಗೆ ಸಾಗುತ್ತಿದ್ದ ನಂದನ ಟ್ರಾವೆಲ್ಸ್ ಬಸ್‌ಗೆ ಸ್ಟೀರಿಂಗ್ ಜಾಮ್ ಆಗಿದ್ದ ಕಾರಣ, ಸುರತ್ಕಲ್‌ನಿಂದ ಚೇಳೈರು ಕಡೆಗೆ ಬರುತ್ತಿದ್ದ ಇಲೆಕ್ಟ್ ಬಸ್‌ಗೆ ತಿರುವಿನಲ್ಲಿ ಮುಖಾಮುಖಿ ಡಿಕ್ಕಿ ಹೊಡೆದಿದೆ.
ಈ ಅಪಘಾತದಿಂದಾಗಿ ಎರಡು ಬಸ್‌ಗಳಿಗೂ ಹಾನಿಯಾಗಿದ್ದು, ಚೇಳೈರು ಸರಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು, ಕೆಲ ಶಿಕ್ಷಕರು, ಬಸ್ ಚಾಲಕ ಹಾಗೂ ಶ್ರೀನಿವಾಸ ಕಾಲೇಜಿನ ವಿದ್ಯಾರ್ಥಿಗಳಿಗೆ ಅಲ್ಪ ಗಾಯಗಳಾಗಿವೆ. ಗಾಯಗೊಂಡವರು ಮುಲ್ಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.