ಡೈಲಿ ವಾರ್ತೆ: 04/ಜುಲೈ/2025

ದನದ ರುಂಡ ಪ್ರಕರಣ: ಶಾಂತಿ ಸೌಹಾರ್ದತೆ ತವರೂರು ಉಡುಪಿಗೆ ಕಿಚ್ಚಿಡಲು ಶರಣ್ ಪಂಪ್ ವೆಲ್ ಹತಾಶ ಯತ್ನ – ಪ್ರಸಾದ್ ರಾಜ್ ಕಾಂಚನ್

ಉಡುಪಿ: ಬ್ರಹ್ಮಾವರದ ಕುಂಜಾಲುವಿನಲ್ಲಿ ನಡೆದಿರುವ ದನದ ರುಂಡ ಪತ್ತೆಯಾದ ಪ್ರಕರಣಕ್ಕೆ ಸಂಭಂಧಿಸಿ ಹಿಂದೂ ಸಂಘಟನೆ ಮುಖಂಡ ಶರಣ್ ಪಂಪ್ ವೆಲ್ ನೀಡಿರುವ ಹೇಳಿಕೆಗಳಿಗೆ ಉಡುಪಿ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಕರಣಕ್ಕೆ ಸಂಭಂಧಿಸಿದಂತೆ ಉಡುಪಿ ಎಸ್ ಪಿ ನೇತೃತ್ವದ ಪೊಲೀಸರ ತಂಡ ಅರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.ಅದರೆ ಸಮಾಜದಲ್ಲಿ ಆಶಾಂತಿಯನ್ನೇ ಬಯಸುವ ಕಿಡಿಗೇಡಿಗಳು ಮತ್ತೆ ಮತ್ತೆ ಅದೇ ವಿಚಾರದಲ್ಲಿ ಕೋಮು ಸೌಹರ್ದ ಕೆಡಿಸುವ ಕಾರ್ಯಕ್ಕೆ ಕೈ ಹಾಕಿರುವುದು ಶೋಚನೀಯ.

ಈ ಪ್ರಕರಣದಲ್ಲಿ ಹಲವು ಮಂದಿ ಬಂಧಿತರಾಗಿದ್ದರೂ ಕೂಡ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಜಿಲ್ಲೆಯಲ್ಲಿ ಆಶಾಂತಿ ಸೃಷ್ಟಿ ಮಾಡುವ ದೃಷ್ಟಿಯಲ್ಲಿ ಉಡುಪಿಗೆ ಅಗಮಿಸಿ ಅನಗತ್ಯ ಗೊಂದಲ ಹಾಗೂ ಕೋಮು ದ್ವೇಷಿ ಹೇಳಿಕೆಗಳನ್ನು ನೀಡುತ್ತಿರುವುದು ಖಂಡನೀಯ ಎಂದು ಹೇಳಿದ್ದಾರೆ.

ಉಡುಪಿ ಜಿಲ್ಲೆ ಸುರಕ್ಷಿತ ಹಾಗೂ ಪ್ರಜ್ಞಾವಂತರ ಜಿಲ್ಲೆ.ಇಲ್ಲಿನ ಜನ ಶಾಂತಿ ನೆಮ್ಮದಿಯನ್ನು ಬಯಸುತ್ತಾರೆ.ಅದರೆ ದಕ್ಷಿಣ ಕನ್ನಡದಲ್ಲಿ ಕೋಮು ದ್ವೇಷಗಳನ್ನು ಹರಡಿಸಿ ಶಾಂತಿ ಕದಡಿಸಿದ ಶರಣ್ ಪಂಪ್ ವೆಲ್ ಈಗ ಉಡುಪಿ ಜಿಲ್ಲೆಯಲ್ಲಿ ಕೋಮು ಸೌಹರ್ದ ಕೆಡಿಸಲು ತೊಡಗೊಸಿದ್ದು ಇದಕ್ಕೆ ಉಡುಪಿ ಜಿಲ್ಲೆ ಜನ ಬೆಂಬಲಿಸುವಿದಿಲ್ಲ ಎಂದಿದ್ದಾರೆ.

ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಕೋಮು ದ್ವೇಶ ಹರಡಿಸಿ ದಾಂಧಲೆ ಹಬ್ಬಿಸುವವರ ವಿರುದ್ದ ಕೋಮು ಹಿಂಸೆ ನಿಗ್ರಹ ದಳ ರಚನೆ ಮಾಡಿದೆ. ಈ ಕಾನೂನಿನ ಅಡಿಯಲಿಯಲ್ಲಿ ಉಡುಪಿ ಜಿಲ್ಲಾ ಪೊಲೀಸರು ಶರಣ್ ಪಂಪ್ ವೆಲ್ ಮೇಲೆ ಕಠಿಣ ಕಾನೂನು ಕ್ರಮ ಕೈಗೊಂಡು ,ಜಿಲ್ಲೆಯಲ್ಲಿ ಶಾಂತಿ‌ ಸೌರ್ಹದತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲಿ ಎಂದು ಆಗ್ರಹಿಸಿದರು.