



ಡೈಲಿ ವಾರ್ತೆ: 04/ಜುಲೈ/2025


ಎಕ್ಸಲೆಂಟ್ ಕುಂದಾಪುರ: “ವಿಜಯ ಕರ್ನಾಟಕ ದಿನಪತ್ರಿಕೆ ಆಯೋಜಿಸಿದ ಚಿತ್ರಕಲೆ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ”

ಕುಂದಾಪುರ: ವಿಜಯ ಕರ್ನಾಟಕ ದಿನಪತ್ರಿಕೆಯು ಆಯೋಜಿಸಿರುವ ಚಿತ್ರಕಲಾ ಸ್ಪರ್ಧೆಯಲ್ಲಿ ನಮ್ಮ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ನಾಲ್ಕು ವಿದ್ಯಾರ್ಥಿಗಳು ತಮ್ಮ ಕಲಾ ನೈಪುಣ್ಯ, ಕರಚಾಕಚಕ್ಯತೆ ಹಾಗೂ ಸೃಜನ ಸಾಮರ್ಥ್ಯದಿಂದ ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡಿರುವುದು ಸಂಸ್ಥೆಗೆ ಹೆಮ್ಮೆಯ ವಿಚಾರವಾಗಿದೆ.
ಈ ಅದ್ಭುತ ಚಿತ್ರಕಲಾ ಸ್ಪರ್ಧೆಗೆ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ಅಕ್ಷರ್ ಎನ್ ಶೆಟ್ಟಿ 10ನೇ ತರಗತಿ, ತನುಶ್ರೀ 10ನೇ ತರಗತಿ, ವಿಭಾ ಬಿ ಶೆಟ್ಟಿ 10ನೇ ತರಗತಿ ಹಾಗೂ ಲಾಲಿತ್ಯ 7ನೇ ತರಗತಿಯ ವಿದ್ಯಾರ್ಥಿಗಳು ವಿಜೇತರಾಗಿ ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.
ಈ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯವರಾದ ಎಂ ಮಹೇಶ್ ಹೆಗ್ಡೆ, ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ, ಮುಖ್ಯೋಪಾಧ್ಯಾಯಿನಿ ಸರೋಜಿನಿ ಪಿ ಆಚಾರ್ಯ ಹಾಗೂ ಶಿಕ್ಷಕ-ಶಿಕ್ಷಕೇತರ ವರ್ಗದವರು ಶುಭ ಕೋರಿ, ಉಡುಪಿ ಜಿಲ್ಲಾ ಮಟ್ಟದಲ್ಲೂ ವಿಜೇತರಾಗಿ ರಾಜ್ಯಮಟ್ಟಕ್ಕೂ ಆಯ್ಕೆಗೊಳ್ಳಲಿ ಎಂದು ಹಾರೈಸಿದರು.