



ಡೈಲಿ ವಾರ್ತೆ: 05/ಜುಲೈ/2025


ದನದ ರುಂಡ ಕಂಡು ರಣಹದ್ದುಗಳಂತೆ ಮೈಕೊಡವಿ ಎದ್ದು ನಿಂತ ಕೋಮುವಾದಿಗಳು – ಕೋಟ ನಾಗೇಂದ್ರ ಪುತ್ರನ್

ಉಡುಪಿ: ದನದ ರುಂಡ ಬಿದ್ದ ತಕ್ಷಣ ಒಂದಷ್ಟು ಜನ ರಣಹದ್ದುಗಳಂತೆ ಕೋಮುವಾದಿಗಳು ಮೈ ಕೊಡವಿ ಎದ್ದು ನಿಂತ್ತಿದ್ದಾರೆ.
ಉಡುಪಿ ಜಿಲ್ಲೆಗೆ ಕಿಚ್ಚಿಡಲು ತುದಿಕಾಲಲ್ಲಿ ನಿಂತ ಶರಣ್ ಪಂಪ್ವೆಲ್, ಸಿ.ಟಿ. ರವಿ, ಸುನಿಲ್ ಕುಮಾರ್ ರಂತಹ ಹಲವಾರು ಬಿಜೆಪಿಯ ಅವಕಾಶಕ್ಕಾಗಿ ಕಾಯ್ತಿದ್ದ ಕೋಮುವಾದಿಗಳು,
ಇವರ ಉದ್ದೇಶ ಮುಂದೆ ನಡೆಯುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಪಂಚಾಯತ್, ಚುನಾವಣೆಗೆ ಹಿಂದೂ ಗಳನ್ನು ಕೆರಳಿಸಿ ತಮ್ಮ ಬೇಳೆ ಬೆಯಿಸಿಕೊಳ್ಳುವ ಹುನ್ನಾರವಾಗಿದೆ.
ಆದರೆ ತಾನೊಂದು ಬಗೆದರೆ ದೈವ ಇನ್ನೊಂದು ಬಗೆಯಿತು ಎಂಬಂತೆ ಉಡುಪಿ ಜಿಲ್ಲೆಯ ದಕ್ಷ ಪೊಲೀಸ್ ಅಧೀಕ್ಷಕರು ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕ್ಷಿಪ್ರ ಕಾರ್ಯಾಚರಣೆಯಿಂದ ಕುಂಜಾಲಿನಲ್ಲಿ ನಡೆದ ದನದ ರುಂಡ ಎಸೆದ ಪ್ರಕರಣದ ಆರೋಪಿಗಳನ್ನು 24ಗಂಟೆಯೊಳಗೆ 6 ಮಂದಿಯನ್ನು ಹಿಡಿದು ಈ ಕೋಮುವಾದಿಗಳ ದುಷ್ಟ ಬುದ್ದಿಗೆ ತಣ್ಣೀರು ಎರಚಿದ್ದಾರೆ.
ಇಂತಹ ಕೋಮುದ್ವೇಷಿಗಳು ಶಾಂತಿಪ್ರಿಯ ಜಿಲ್ಲೆಯಾದ ಉಡುಪಿ ಜಿಲ್ಲೆಗೆ ಕಾಲಿಡ ಬಾರದೆಂಬುದೆ ನಮ್ಮ ಮನವಿ.
ಒಬ್ಬ ಬಾಡಿಗೆ ಭಾಷಣಗಾರ ಸೂಲಿಬೆಲೆ, ಇನ್ನೊಬ್ಬ ಪ್ರಭಾಕರ್ ಭಟ್ಟ, ಮತ್ತೊಬ್ಬ ಪ್ರತಾಪ್ ಸಿಂಹ ರಂತಹ ದ್ವೇಷಿ ಭಾಷಣ ಮಾಡುವಂತಹ ಕಿಡಿಗೇಡಿಗಳು ಉಡುಪಿಯಂತಹ ಪವಿತ್ರ ಭೂಮಿಗೆ ಕಾಲಿಡದಂತೆ ಮಾಡಬೇಕು.
ನಾವು ಉಡುಪಿ ಜನ ಶಾಂತಿ ಪ್ರಿಯರು, ಬುದ್ದಿವಂತರು ನಮಗೆ ಯಾವುದೇ ಜಾತಿ, ಧರ್ಮದ ಬಗ್ಗೆ ದ್ವೇಷ ಇಲ್ಲ, ಎಲ್ಲಾ ಧರ್ಮವರು ನೆಮ್ಮದಿಯಿಂದ ಬಾಳಿ ಬದುಕ ಬೇಕು, ನಮ್ಮ ಮಕ್ಕಳಿಗೆ ಒಂದು ಉತ್ತಮ ಸೌಹಾರ್ದ ಯುತ ಸಮಾಜವನ್ನು ನಿರ್ಮಿಸಿ ಕೊಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ.
ಈ ಎಲ್ಲಾ ದುಷ್ಟ ಕೂಟಗಳಿಂದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯನ್ನು ರಕ್ಷಿಸುವುದಕ್ಕೋಸ್ಕರ ಸಿದ್ದರಾಮಯ್ಯ ಸರಕಾರ ತೆಗೆದು ಕೊಂಡ ನಿರ್ಧಾರ ಈ ಎರಡು ಜಿಲ್ಲೆಯ ಜನರ ಪ್ರಶಂಸೆಗೆ ಒಳಪಟ್ಟಿರುತ್ತದೆ ಅಲ್ಲದೆ ಕೋಮುವಾದಿಗಳ ನಿದ್ದೆ ಗೆಡಿಸಿದೆ.
ಈ ನಮ್ಮ ಸರಕಾರವು ಎರಡು ಜಿಲ್ಲೆಗೆ ನಿಷ್ಠಾವಂತ ಉತ್ತಮ ಪೊಲೀಸ್ ಅಧಿಕಾರಿಗಳನ್ನು ನೇಮಿಸಿ ಕೋಮುಗಲಭೆ ಸೃಷ್ಟಿಸುವ ವ್ಯಕ್ತಿಗಳ ಮಟ್ಟಹಾಕಲು ತೆಗೆದು ಕೊಂಡಿರುವ ನಿರ್ಧಾರ ಎರಡು ಜಿಲ್ಲೆಯ ಸ್ವಾಭಿಮಾನಿ ಜನರನ್ನು ಸಂತೋಷ ಗೊಳಿಸಿದೆ.
ಇನ್ನಾದರು ಈ ಜಿಲ್ಲೆಯ ಜನ ನೆಮ್ಮದಿ ಇಂದ ಬದುಕುವಂತಾಗಲಿ, ಮಕ್ಕಳು ನೆಮ್ಮದಿ ಇಂದ ಶಾಲೆಗೆ ಹೋಗಿ ಬರುವಂತೆ ಆಗಲಿ, ವ್ಯಾಪಾರಸ್ಥರು ನೆಮ್ಮದಿಯ ದುಡಿಮೆ ಮಾಡುವಂತೆ ಆಗಲಿ, ಸರ್ವ ಧರ್ಮದ ಜನರು ಒಗ್ಗಟ್ಟಿನಿಂದ ಹಬ್ಬ ಹರಿದಿನ ಆಚರಿಸುವಂತ್ತಾಗಲಿ, ಒಟ್ಟಿನಲ್ಲಿ ಕೆಲವು ವರ್ಷಳಿಂದ ಈಚೆ ಅಭಿವೃದ್ಧಿ ಅಲ್ಲಿ ಕುಂಟಿತ ಗೊಂಡಿರುವ ಎರಡು ಜಿಲ್ಲೆಗಳು ನಾಗಲೋಟ ದಿಂದ ಅಭಿವೃದ್ಧಿ ಹೊಂದುವಂತಾಗಲಿ ಎಂಬುದು ಈ ಎರಡು ಜಿಲ್ಲೆಯ ಜನರ ಬಯಕೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.