



ಡೈಲಿ ವಾರ್ತೆ: 07/ಜುಲೈ/2025


ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ ಉಪ್ಪೂರು
ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ

ಉಡುಪಿ : ವಿಶ್ವ ಬ್ರಾಹ್ಮಣ ಸಮಾಜ್ಯೋಧಾರಕ ಸಂಘ ಉಪ್ಪೂರು ಹಾಗೂ ಶ್ರೀ ಶಶಿಧರ್ ಪುರೋಹಿತ್ ಅವರ ನೇತೃತ್ವದ ಸಮಾನ ಮನಸ್ಕ ತಂಡದವರ ಜಂಟಿ ಸಹಯೋಗದೊಂದಿಗೆ “ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ” ನೆರವೇರಿತು. ಪುಸ್ತಕಗಳನ್ನು ಶಶಿಧರ್ ಪುರೋಹಿತ್ ಕಟ್ಟಾಡಿ ಹಾಗೂ ಸಮಾನ ಮನಸ್ಕ ತಂಡ ಇವರ ವತಿಯಿಂದ ಉಪ್ಪೂರು ಗ್ರಾಮದ ಸುಮಾರು 30 ವಿದ್ಯಾರ್ಥಿಗಳು ಈ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಕೃಷ್ಣ ಆಚಾರ್ಯ ಅವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಯಾಗಿ ಶಶಿಧರ್ ಪುರೋಹಿತ್ ಕಟ್ಪಾಡಿ, ಕೆನರಾ ಬ್ಯಾಂಕ್ ನ ಉದ್ಯೋಗಿ ವಜ್ರೇಶ್ವರಿ ಬ್ರಹ್ಮಾವರ, ಸರಕಾರಿ ಪ್ರೌಢಶಾಲೆ ಕಳ್ತೂರು ಹೆಬ್ರಿ ಇಲ್ಲಿನ ಶಿಕ್ಷಕರಾದ ಚಿತ್ರಕಲ, ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷರಾದ ರವಿಚಂದ್ರ ಆಚಾರ್ಯ ಮಾರಳಿ, ರಾಷ್ಟ್ರೀಯ ವಿಶ್ವ ಬ್ರಾಹ್ಮಣ ಸಮಾಜ ಸೇವಾದಳ ಉಡುಪಿ ಇದರ ದಿವಾಕರ ಆಚಾರ್ಯ, ವಿಶ್ವಬ್ರಾಹ್ಮಣ ಯುವಕ ಸೇವದಳ ಉಡುಪಿ ನಿಕಟ ಪೂರ್ವ ಅಧ್ಯಕ್ಷರು ಸದಾಶಿವ ಆಚಾರ್ಯ, ಎಸ್ ಕೆ. ಜಿ ಯ ನಿವೃತ್ತ ಮ್ಯಾನೇಜರ್ ವಾಸುದೇವ ಆಚಾರ್ಯ, ಯಜ್ಞಾನಾಥ ಆಚಾರ್ಯ ಬಾಳ್ಕಟ್, ಸಂಘದ ಗೌರವ ಸಲಹೆಗಾರರಾದ ಧನಂಜಯ ಆಚಾರ್ಯ, ಕಾಳಿಕಾಂಬ ಮಹಿಳಾ ಮಂಡಳಿಯ ಅಧ್ಯಕ್ಷರಾದ ಸುನಂದ ಆಚಾರ್ಯ ಉಪಸ್ಥಿತರಿದ್ದರು.
ಮನುಷ್ಯನಿಗೆ ಮೂಲಭೂತ ಅವಸ್ಯಕತೆಯಾದ ವಸತಿ ಆಹಾರ ಹಾಗೂ ಶಿಕ್ಷಣದ ಸುಧಾರಣೆಗೆ ಶಶಿಧರ್ ಪುರೋಹಿತ್ ಅವರ ಸಾಮಾಜಿಕ ಕಳಕಳಿ ಹಾಗೂ ಕಾರ್ಯಗಳ ಬಗ್ಗೆ ಅಥಿತಿ ಗಣ್ಯರು ಮೆಚ್ಚುಗೆಯ ಮಾತುಗಳನ್ನು ಆಡಿದರು. ಆಗಮಿಸಿದವರಿಗೆ ಉಪಾಹಾರದ ವ್ಯವಸ್ಥೆಯನ್ನು ಸಂಘದ ನಾಗೇಶ್ ಆಚಾರ್ಯ ಮಾಡಿದ್ದು, ಸಮಾರಂಭದಲ್ಲಿ ಸಂಘದ ಉಪಾಧ್ಯಕ್ಷ ಹರೀಶ್ ಆಚಾರ್ಯ ಸ್ವಾಗತಿಸಿ, ಕಾಳಿಕಾಂಬ ಮಹಿಳಾ ಬಳಗದ ನಿಕಟ ಪೂರ್ವ ಕಾರ್ಯದರ್ಶಿ ಕವಿತಾ ಟೀಚರ್ ಫಲಾನುಭವಿಗಳ ಪಟ್ಟಿಯನ್ನು ವಾಚಿಸಿದರು, ಸಂಘಟನಾ ಕಾರ್ಯದರ್ಶಿ ಪಾಂಡುರಂಗ ಆಚಾರ್ಯ ಸರ್ವರಿಗೂ ವಂದಿಸಿದರು, ಕಾರ್ಯದರ್ಶಿ ಸುಬ್ರಹ್ಮಣ್ಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.