ಡೈಲಿ ವಾರ್ತೆ: 09/ಜುಲೈ/2025

ಕುಂದಾಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಉಡುಪಿ ಜಿಲ್ಲಾ ಘಟಕ ವತಿಯಿಂದ ಅಂತಾರಾಷ್ಟ್ರೀಯ ಪವರ್ ಲಿಫ್ಟರ್ ಸತೀಶ್ ಖಾರ್ವಿಗೆ ಸನ್ಮಾನ

ಕುಂದಾಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಉಡುಪಿ ಜಿಲ್ಲಾ ಘಟಕ ಮತ್ತು ಅಂಬೇಡ್ಕರ್ ಸೇನೆ ಉಡುಪಿ ವತಿಯಿಂದ ಇಂದು ಉಡುಪಿ ಜಿಲ್ಲೆಯ ಕುಂದಾಪುರ ದ ತ್ರಾಸಿಯ ಪ್ರೆಸ್ಟಿಜ್ ಹಾಲ್ನಲ್ಲಿ ಪತ್ರಿಕಾ ದಿನಾಚಾರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಕುಂದಾಪುರದ ಹೆಮ್ಮೆಯ ಅಂತಾರಾಷ್ಟ್ರೀಯ ಪವರ್ ಲಿಫ್ಟರ ಶ್ರೀ ಸತೀಶ್ ಖಾರ್ವಿ ಅವರನ್ನು ಸನ್ಮಾನಿಸಲಾಯಿತು.


ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಪರವಾಗಿ ಕುಂದಾಪುರ ಹಿರಿಯ ನ್ಯಾಯವಾದಿ ರವಿಕಿರಣ್ ಮುರುಡೇಶ್ವರ ಅವರು ಸತೀಶ್ ಖಾರ್ವಿ ಅವರಿಗೆ ಶಾಲು ಹೊದಿಸಿ, ಪೇಟ , ತೊಡಿಸಿ , ಹಾರ ಹಾಕಿ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕ್ಲಾಸಿಕ್ ಬಿಲ್ಡರ್ಸ್ ಮಾಲಕರಾದ ಪ್ರಭಾಕರ್ ಪೂಜಾರಿ ಉಡುಪಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯ ಅಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ , ಕುಂದಾಪುರ ವಲಯ ಅರಣ್ಯ ಅಧಿಕಾರಿ ರಾಘವೇಂದ್ರ ನಾಯ್ಕ, ಕುಂದಾಪುರ ಸರ್ಕಾರಿ ಆಸ್ಪತ್ರೆ ವೈದ್ಯ ಡಾಕ್ಟರ್ ನಾಗೇಶ್ ಪುತ್ರನ್ , ಉದ್ಯಮಿ ಶಿವ ಪೂಜಾರಿ, ಉದ್ಯಮಿ ಪ್ರವೀಣ್ ಶೆಟ್ಟಿ, ಯುವ ಉದ್ಯಮಿ ಮಂಜುನಾಥ್ ಪೂಜಾರಿ ,ಸಮಾಜ ಸೇವಕ ಮಂಜುನಾಥ್ ಸಾಲಿಯಾನ್ ಮುಂತಾದ ಗಣ್ಯರು , ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಉಡುಪಿ ಜಿಲ್ಲೆ ಅಧ್ಯಕ್ಷ ದಾಮೋದರ್ ಮೊಗವೀರ, ಉಪಾಧ್ಯಕ್ಷ ಸತೀಶ್ ಕಂಚುಗೂಡು, ಉಡುಪಿ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.