ಡೈಲಿ ವಾರ್ತೆ: 09/ಜುಲೈ/2025

ಪೆರ್ನೆ| ಸಿ.ಎ. ಪರೀಕ್ಷೆಯಲ್ಲಿ ಮುಹಮ್ಮದ್ ಇಯಾಸ್ ಗ್ರೂಪ್ ಒಂದು ಮತ್ತು ಎರಡರಲ್ಲಿ ಯಶಸ್ವಿ ಉತ್ತೀರ್ಣ

ಪುತ್ತೂರು: ಭಾರತೀಯ ಚಾರ್ಟಡ್ ಎಕೌಂಟೆಂಟ್ಸ್ ಸಂಸ್ಥೆ (ಐಸಿಎಐ)ಯು 2025 ರಲ್ಲಿ ನಡೆಸಿದ ಸಿ.ಎ. ಪರೀಕ್ಷೆಯಲ್ಲಿ | ಬಂಟ್ವಾಳ ತಾಲೂಕಿನ ಪೆರ್ನೆ ನಿವಾಸಿ ಮುಹಮ್ಮದ್ ಇಯಾಸ್ ರವರು ಮೊದಲ ಪ್ರಯತ್ನದಲ್ಲಿಯೇ ಗ್ರೂಪ್ ಒಂದು ಮತ್ತು ಗ್ರೂಪ್ ಎರಡರಲ್ಲೂ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ.

ಪೆರ್ನೆ ನಿವಾಸಿ ಇಸ್ಮಾಯಿಲ್ ಮತ್ತು ರುಖ್ಯಾ ದಂಪತಿಯ ಕಿರಿಯ ಪುತ್ರನಾಗಿರುವ ಮುಹಮ್ಮದ್ ಇಯಾಸ್ ರವರು ಸಿಎ ಗಣೇಶ್ ರಾವ್ ಪಿ. ಅವರ ಮಾರ್ಗದರ್ಶನದಲ್ಲಿ ಕಳೆದ ಮೇ ತಿಂಗಳು ನಡೆದ ಸಿಎ ಅಂತಿಮ ಪರೀಕ್ಷೆಗೆ ಹಾಜರಾಗಿ ಉತ್ತೀರ್ಣರಾಗಿದ್ದಾರೆ. ಮುಹಮ್ಮದ್ ಇಯಾಸ್ ಅವರು ಪೆರ್ನೆಯ ಶ್ರೀ ರಾಮಚಂದ್ರ ಪ್ರೌಢಶಾಲೆ, ಉಪ್ಪಿನಂಗಡಿಯ ಇಂದ್ರಪ್ರಸ್ಥಪಿಯು ಕಾಲೇಜು ಮತ್ತು ತ್ರಿಶಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.

ಮುಹಮ್ಮದ್ ಇಯಾಸ್ ಇವರ ಸಹೋದರ ಮುಹಮ್ಮದ್ ಉನೈಸ್ ಅವರು ಸರ್ಕಾರಿ ಕೋಟದ ಎಂಬಿಬಿಎಸ್ ಪದವಿಯನ್ನು ಪಡೆದು ಕೊಂಡಿದ್ದು, ಪ್ರಸ್ತುತ
ಮಹಾರಾಷ್ಟ್ರದ ಸ್ವಾಮಿ ರಮಾನಂದ ತೀರ್ಥ ಗ್ರಾಮೀಣ ಸರ್ಕಾರಿ ವೈದ್ಯಕೀಯ ಕಾಲೇಜು, ಅಂಬಾಜೋಗಿ ಇಲ್ಲಿ ಮಕ್ಕಳ ತಜ್ಞ ಉನ್ನತ ವೈದ್ಯಕೀಯ
ವ್ಯಾಸಂಗಮಾಡುತ್ತಿದ್ದಾರೆ.