


ಡೈಲಿ ವಾರ್ತೆ: 10/ಜುಲೈ/2025


ಕೋಟ|ಗುರುಪೂರ್ಣಿಮೆ ಅಂಗವಾಗಿ ಗುರುವಂದನಾ ಕಾರ್ಯಕ್ರಮ: ನಿವೃತ್ತ ಮುಖ್ಯೋಪಾಧ್ಯಾಯ ಮಹಾಲಿಂಗ ದೇವಾಡಿಗರಿಗೆ ಸನ್ಮಾನ

ಕೋಟ: ಗುರುಪೂರ್ಣಿಮೆಯ ಅಂಗವಾಗಿ ಗುರುವಂದನಾ ಕಾರ್ಯಕ್ರಮದಲ್ಲಿ ಶ್ರೀ ಶಾಂಭವಿ ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆ ಗಿಳಿಯಾರು ಇದರ ನಿವೃತ್ತ ಮುಖ್ಯೋಪಾಧ್ಯಾಯರಾದ
ಮಹಾಲಿಂಗ ದೇವಾಡಿಗ ಇವರನ್ನು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರು
ಕಾಸನಗುಂದು ಮಹಾಲಿಂಗ ದೇವಾಡಿಗ ಅವರ
ಸ್ವಗೃಹದಲ್ಲಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕೋಟ ಪಂಚಾಯತಿನ ಮಾಜಿ ಅಧ್ಯಕ್ಷರಾದ ಅಜಿತ್ ದೇವಾಡಿಗ, ಸದಸ್ಯರಾದ ಚಂದ್ರ ಪೂಜಾರಿ, ಸಂತೋಷ ಪ್ರಭು, ಗೋಪಾಲ್ ಪೈ ಮೊದಲದವರು ಉಪಸ್ಥಿತರಿದ್ದರು.