ಡೈಲಿ ವಾರ್ತೆ: 11/ಜುಲೈ/2025

ಶಿವಮೊಗ್ಗ| ಎಣ್ಣೆ ಪಾರ್ಟಿಯಲ್ಲಿ ಕಿರಿಕ್ – ಸ್ನೇಹಿತನ ಕೊಲೆಯಲ್ಲಿ ಅಂತ್ಯ!

ಶಿವಮೊಗ್ಗ: ಸ್ನೇಹಿತನ ಮನೆಗೆ ಎಣ್ಣೆ ಪಾರ್ಟಿಗೆ ಹೋದವ ಬರ್ಬರ ಹತ್ಯೆಯಾಗಿರುವ ಭಯಾನಕ ಘಟನೆ ಶಿವಮೊಗ್ಗ ನಗರ ಹೊರವಲಯದ ಬೊಮ್ಮನಕಟ್ಟೆ ಇ-ಬ್ಲಾಕ್ ನಲ್ಲಿ ಜು. 10 ರಂದು ಗುರುವಾರ ತಡರಾತ್ರಿ ನಡೆದಿದೆ.

ಕೊಲೆಯಾದ ಯುವಕ ಬೊಮ್ಮನಕಟ್ಟೆ ಎ-ಬ್ಲಾಕ್ ನಿವಾಸಿ ಪವನ್ (28) ಎಂದು ತಿಳಿದು ಬಂದಿದೆ.
ಆರೋಪಿ ಶಿವಕುಮಾ‌ರ್ (49) ಬಂದಿಸಲಾಗಿದೆ.

ಪವನ್ ಗುರುವಾರ ತ ರಾತ್ರಿ ಸ್ನೇಹಿತನ ಮನೆಗೆ ಎಣ್ಣೆ ಪಾರ್ಟಿಗೆಂದು ಬೊಮ್ಮನಕಟ್ಟೆ ಇ-ಬ್ಲಾಕ್ ನಲ್ಲಿರುವ ಶಿವಕುಮಾರ್ ಮನೆಗೆ ತೆರಳಿದ್ದಾನೆ. ಇದಾದ ಬಳಿಕ ಪಾರ್ಟಿ ನಡುವೆ ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ಕಿರಿಕ್ ಉಂಟಾಗಿ ಇಬ್ಬರ ನಡುವೆ ಜಗಳ ನಡೆದು ಶಿವಕುಮಾ‌ರ್ ಮನೆಯಲ್ಲೇ ಪವನ್ ನನ್ನು ಕೊಲೆಮಾಡಿದ್ದಾನೆ.

ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಸ್ಥಳಕ್ಕೆ ಎಸ್ಪಿ ಜಿ.ಕೆ.ಮಿಥುನ್ ಕುಮಾ‌ರ್, ಶಿವಮೊಗ್ಗ ಸಬ್‌ ಡಿವಿಜನ್-2 ಡಿವೈಎಸ್ಪಿ ಸಂಜೀವ್‌ ಕುಮಾ‌ರ್ ಭೇಟಿ ಪರಿಶೀಲನೆ ನಡೆಸುತ್ತಿದ್ದು ಜೊತೆಗೆ ಬೆರಳಚ್ಚು ಮತ್ತು ಫಾರೆನ್ಸಿಕ್ ತಜ್ಞರ ಭೇಟಿ ನೀಡಿ ಘಟನಾ ಸ್ಥಳವನ್ನು ಪರಿಶೀಲನೆ ನಡೆಸಿದ್ದಾರೆ.

ಆರೋಪಿ ಪವನ್ ನನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ.