


ಡೈಲಿ ವಾರ್ತೆ: 11/ಜುಲೈ/2025


ನಿವೃತ್ತ ಶಿಕ್ಷಕ ಕೆ.ಎಂ. ಶ್ರೀನಿವಾಸ ಹಂದೆ ಕೋಟತಟ್ಟು ಪಡುಕರೆ ಇವರು ವಯೋಸಹಜ ಕಾಯಿಲೆಯಿಂದ ನಿಧನ

ಕೋಟ: ನಿವೃತ್ತ ಶಿಕ್ಷಕ ಕೆ.ಎಂ. ಶ್ರೀನಿವಾಸ ಹಂದೆ (87) ಕೋಟತಟ್ಟು ಪಡುಕರೆ ಇವರು ವಯೋಸಹಜ ಕಾಯಿಲೆಯಿಂದ ಜು. 11 ರಂದು ದೈವಾದೀನರಾಗಿರುತ್ತಾರೆ.
ಶ್ರೀ ಶಾಂಭವೀ ವಿದ್ಯಾದಾಯಿನೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 37 ವಷ೯ ಶಿಕ್ಷಕ ರಾಗಿ ಸೇವೆ ಸಲ್ಲಿಸಿ ಅಪಾರ ಸಂಖ್ಯೆಯ ಶಿಷ್ಯರಿಗೆ ಮಾರ್ಗದರ್ಶನ ಮಾಡಿದ್ದಾರೆ.
ಪತ್ನಿ,ಓವ೯ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.