ಡೈಲಿ ವಾರ್ತೆ: 17/ಜುಲೈ/2025

ಮಂಗಳೂರು| ಧರೆ ಕುಸಿದು ಹಲವು ದ್ವಿಚಕ್ರ ವಾಹನಗಳು ಹಾಗೂ ಒಂದು ಕಾರು ಸಂಪೂರ್ಣ ಜಖಂ

ಮಂಗಳೂರು: ನರದೆಲ್ಲೆಡೆ ನಿರಂತರ ಮಳೆ ಸುರಿಯುತ್ತಿದ್ದು,
ಪದವಿನಂಗಡಿ ಬಳಿ ಹಿಂಬದಿ ಧರೆ ಬಿದ್ದ ಪರಿಣಾಮ ಪಕ್ಕದಲ್ಲೇ ನಿಲ್ಲಿಸಿದ್ದ ಸುಮಾರು 15 ದ್ವಿಚಕ್ರ ವಾಹನ ಹಾಗೂ 1 ಕಾರು ಸಂಪೂರ್ಣ ನಜ್ಜುಗುಜ್ಜಾದ ಘಟನೆ ಜು.17ರ ಗುರುವಾರ ನಡೆದಿದೆ.

ಪದವಿನಂಗಡಿ ಬಳಿಯಿರುವ ಕೆನರಾ ವಿಕಾಸ್ ಪಿಯು ಕಾಲೇಜಿನ ಹಿಂಬದಿಯ ಧರೆ ಬಿದ್ದು ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.