ಡೈಲಿ ವಾರ್ತೆ: 20/ಜುಲೈ/2025

ಬಂಟ್ವಾಳ: ಜಮೀಯ್ಯತುಲ್ ಫಲಾಹ್ ನ ನೂತನ ಕಛೇರಿ, ವಿದ್ಯಾರ್ಥಿ ಮಾಹಿತಿ ಮತ್ತು ಸಮಾಲೋಚನಾ ಕೇಂದ್ರದ ಉದ್ಘಾಟನೆ

ಬಂಟ್ವಾಳ : ಕರಾವಳಿಯ ಉಭಯ ಜಿಲ್ಲೆಗಳ ಸಮುದಾಯದ ಶೈಕ್ಷಣಿಕ ಸಬಲೀಕರಣದಲ್ಲಿ ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಪಾತ್ರ ಮಹತ್ತರವಾದುದು ಆದುದರಿಂದಲೇ ಇಂದು ಸಹಸ್ರಾರು ವಿದ್ಯಾರ್ಥಿಗಳು ಶಾಲಾ ಕಾಲೇಜು ಶಿಕ್ಷಣದ ಕಡೆಗೆ ಆಸಕ್ತರಾದುದು ಗಮನಾರ್ಹ ಬೆಳವಣಿಗೆ ಎಂದು ಜಮೀಯ್ಯತುಲ್ ಫಲಾಹ್ ದ.ಕ ಮತ್ತು ಜಿಲ್ಲಾಧ್ಯಕ್ಷ ಕೆ.ಕೆ‌.ಶಾಹುಲ್ ಹಮೀದ್ ಅಭಿಪ್ರಾಯಪಟ್ಟರು.

ಅವರು ಸಂಸ್ಥೆಯ ಪಾಣೆಮಂಗಳೂರು – ಮೆಲ್ಕಾರಿನ ಗೋಲ್ಡನ್ ಸಿಟಿ ಸಂಕೀರ್ಣದಲ್ಲಿ ಬಂಟ್ವಾಳ ಘಟಕದ ನೂತನ ಕಛೇರಿಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಸಭಾಧ್ಯಕ್ಷತೆಯನ್ನು ವಹಿಸಿದ್ದ ಬಂಟ್ವಾಳ ತಾಲೂಕು ಘಟಕಾಧ್ಯಕ್ಷ ರಶೀದ್ ವಿಟ್ಲ ಅವರು ಮಾತನಾಡಿ, 1988 ರಲ್ಲಿ ಆರಂಭವಾದ ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕವು ಸ್ವಂತ ಕಛೇರಿ ಹೊಂದಬೇಕೆಂಬ ಅಭಿಲಾಷೆಯನ್ನು ಅನೇಕ ಸಮಯದಿಂದ ಹೊಂದಿತ್ತು. ಆ ಸುಸಂದರ್ಭ 2025 ರಲ್ಲಿ ಈಡೇರಿತು. ತನ್ನ ಅಧ್ಯಕ್ಷತೆಯ ಅವಧಿಯಲ್ಲಿ ಸಂಸ್ಥೆಗೆ ತನ್ನದೇ ಆದ ಕಛೇರಿಯನ್ನು ಹೊಂದಲು ಸಹಕರಿಸಿದ ದಾನಿಗಳ ನೆರವನ್ನು ಕೊಂಡಾಡಿದರು.

ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಯ ಮುದರ್ರಿಸ್ ಅಬೂಸ್ವಾಲೀಹ್ ಮುಸ್ಲಿಯಾರ್ ದುವಾ ನೆರವೇರಿಸಿದರು. ಜಮೀಯ್ಯತುಲ್ ದ.ಕ.ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಶೇಖ್ ಅಬ್ದುಲ್ ಗಫೂರ್, ನಾಮಫಲಕ ಅನಾವರಣ ಗೊಳಿಸಿದರು, ಜುಬೈಲ್ ಘಟಕದ ಅಧ್ಯಕ್ಷ, ಎನ್ನಾರ್ಸಿಸಿ ಮಾಜಿ ಅಮೀರ್ ಫಾರೂಕ್ ಫೋರ್ಟ್ ವೇ ಕಾನ್ಫರೆನ್ಸ್ ಕೊಠಡಿ ಉದ್ಘಾಟಿಸಿದರು, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕ ಅರ್ಜುನ್ ಭಂಡಾರ್ಕರ್ “ಚೈತನ್ಯ” ಸಂಚಿಕೆ ಬಿಡುಗಡೆಗೊಳಿಸುವರು.

ಅಜೀವ ಸದಸ್ಯ, ಪಿಡಬ್ಲ್ಯೂಡಿ ಗುತ್ತಿಗೆದಾರ ಉಮ್ಮರ್ ಹಾಜಿ ರಾಜ್ ಕಮಲ್, ಜೆದ್ದಾ ಘಟಕದ ಅಶ್ಫಾಕ್ ಅತಿಥಿಗಳಾಗಿ ಭಾಗವಹಿಸಿದ್ದರು

ಇದೇ ವೇಳೆ ಮೆಲ್ಕಾರಿನ ಗೋಲ್ಡನ್ ಸಿಟಿ ಕಾಂಪ್ಲೆಕ್ಸ್ ನಲ್ಲಿ ಸುಮಾರು 500 ಚದರ ಅಡಿ ವಿಸ್ತೀರ್ಣದ ಸ್ಥಳವನ್ನು ಸಂಸ್ಥೆಗೆ ದಾನ ನೀಡಿದ ಘಟಕದ ಪೂರ್ವಾದ್ಯಕ್ಷರುಗಳಾದ ಹಾಜಿ ಮೊಹಮ್ಮದ್ ಹನೀಫ್ ಗೋಳ್ತಮಜಲು, ಮೊಹಮ್ಮದ್ ರಫೀಕ್ ಹಾಜಿ ಆಲಡ್ಕ, ಘಟಕಕ್ಕೆ ಎರಡು ದಶಕಗಳಿಂದ ಕಚೇರಿಯನ್ನು ಉಚಿತವಾಗಿ ನೀಡಿ ಸಹಕರಿಸಿದ ಕೋಶಾಧಿಕಾರಿ ಎಂ.ಎಚ್. ಇಕ್ಬಾಲ್, 2023 -25 ನೇ ಸಾಲಿನಲ್ಲಿ ಸಂಸ್ಥೆಯ ವತಿಯಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿದ ಘಟಕಾದ್ಯಕ್ಷ ರಶೀದ್ ವಿಟ್ಲ ಅವರನ್ನು ಸನ್ಮಾನಿಸಲಾಯಿತು.

ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ಉಪಾಧ್ಯಕ್ಷರಾದ ಲತೀಫ್ ನೇರಳಕಟ್ಟೆ, ಶೇಕ್ ರಹ್ಮತುಲ್ಲಾ ಕಾವಳಕಟ್ಟೆ, ಕಾರ್ಯಕಾರಿ ಸಮಿತಿಯ ಸದಸ್ಯರಾದ ನೋಟರಿ ಅಬೂಬಕ್ಕರ್ ವಿಟ್ಲ , ಬಿ.ಎಂ. ಅಬ್ಬಾಸ್ ಅಲಿ ಬೋಳಂತೂರು, ಆಸೀಫ್ ಇಕ್ಬಾಲ್ ಫರಂಗಿಪೇಟೆ, ಪಿ.ಮೊಹಮ್ಮದ್ ಪಾಣೆಮಂಗಳೂರು, ಮೊಹಮ್ಮದ್ ನಾರಂಗೋಡಿ, ಅಬ್ದುಲ್ ಹಕೀಂ ಕಲಾಯಿ, ಬಿ.ಎಂ.ತುಂಬೆ ಭಾಗವಹಿಸಿದ್ದರು.

ಬಿ.ಎ.ಮುಹಮ್ಮದ್ ಬಂಟ್ವಾಳ ಕಿರಾಅತ್ ಪಠಿಸಿದರು, ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು