ಡೈಲಿ ವಾರ್ತೆ: 20/ಜುಲೈ/2025

ಬಂಟ್ವಾಳ : ಯು.ಇ.ಎ ಅದ್ಯಕ್ಷರಾಗಿ ಲತೀಫ್ ನೇರಳಕಟ್ಟೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಆಶಿಕ್ ಕುಕ್ಕಾಜೆ ಪುನರಾಯ್ಕೆ

ಬಂಟ್ವಾಳ : ಯುನೈಟೆಡ್ ಎಂಪವರ್ಮೆಂಟ್ ಅಸೋಸಿಯೇಷನ್ ಬಂಟ್ವಾಳ ವಲಯ ಇದರ ನೂತನ ಅಧ್ಯಕ್ಷರಾಗಿ ಲತೀಫ್ ನೇರಳಕಟ್ಟೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಆಶಿಕ್ ಕುಕ್ಕಾಜೆ ಪುನರಾಯ್ಕೆ ಗೊಂಡಿದ್ದಾರೆ.

ಇತ್ತೀಚೆಗೆ ಕಲ್ಲಡ್ಕ – ಕೆ.ಸಿ.ರೋಡ್ ನ ಇಲೆವೆನ್ ಸ್ಟಾರ್ ಹಾಲ್ ನಲ್ಲಿ ನಡೆದ ಅಸೋಸಿಯೇಷನ್ ನ ಬಂಟ್ವಾಳ ವಲಯ ಸಭೆಯಲ್ಲಿ ಈ ಆಯ್ಕೆ ನಡೆಯಿತು.

ಯು.ಇ.ಎ. ಯ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್ ಗೋಳ್ತಮಜಲು ಸಭೆಯನ್ನು ಉದ್ಘಾಟಿಸಿದರು, ರಾಜ್ಯ ಸಮಿತಿ ಸದಸ್ಯ, ದ.ಕ. ಮತ್ತು ಕಾಸರಗೋಡು ಜಿಲ್ಲಾ ಉಸ್ತುವಾರಿ ದಾವೂದ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಮುಸ್ತಫಾ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

ಅತಿಥಿಗಳಾಗಿ ಭಾಗವಹಿಸಿದ್ದ ಬಂಟ್ವಾಳ ಮುಸ್ಲಿಂ ಸಮಾಜದ ಪ್ರಧಾನ ಕಾರ್ಯದರ್ಶಿ ಹನೀಫ್ ಖಾನ್ ಕೊಡಾಜೆ, ಬಂಟ್ವಾಳ ಪುರಸಭಾ ಸದಸ್ಯ ಮೂನಿಷ್ ಅಲಿ ಮಾತನಾಡಿ ಶುಭ ಹಾರೈಸಿದರು.

ಪ್ರಮುಖರಾದ ಹನೀಫ್ ಕೋಸ್ಟಲ್, ಇಕ್ಬಾಲ್ ಕೆ.ಟಿ.ಟಿ., ಶಬ್ಬೀರ್ ಅಹ್ಮದ್ ಶಾಂತಿಅಂಗಡಿ, ಇದಿನಬ್ಬ ನಂದಾವರ, ಎಂ.ಎಂ.ಮೋನು ನಂದಾವರ, ಖಲೀಲ್ ಕರ್ನಾಟಕ, ಉಬೈದ್ ಬಂಟ್ವಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಸೋಸಿಯೇಷನ್ ಅಧ್ಯಕ್ಷ ಲತೀಫ್ ನೇರಳಕಟ್ಟೆ ಸ್ವಾಗತಿಸಿ, ಕಾರ್ಯದರ್ಶಿ ಆಶಿಕ್ ಕುಕ್ಕಾಜೆ ವಂದಿಸಿದರು. ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.

ನೂತನ ಪದಾಧಿಕಾರಿಗಳು: ಕೋರ್ ಕಮಿಟಿ ಸದಸ್ಯರಾಗಿ ಹನೀಫ್ ಖಾನ್ ಕೊಡಾಜೆ, ಹನೀಫ್ ಕೋಸ್ಟಲ್, ಮೂನಿಷ್ ಅಲಿ ಬಂಟ್ವಾಳ, ಲುಕ್ಮಾನ್ ಬಿ.ಸಿ.ರೋಡ್, ಕೆ.ಎಸ್.ಯಾಸಿರ್ ಹಾಜಿ ಕಲ್ಲಡ್ಕ ಅವರನ್ನು ಆರಿಸಲಾಯಿತು.

ಅಧ್ಯಕ್ಷರಾಗಿ ಲತೀಫ್ ನೇರಳಕಟ್ಟೆ,
ಉಪಾಧ್ಯಕ್ಷರುಗಳಾಗಿ ನೌಶೀರ್ ತಲಪಾಡಿ, ಖಲೀಲ್ ಕರ್ನಾಟಕ, ಇಕ್ಬಾಲ್ ಪರ್ಲಿಯ, ಇಕ್ಬಾಲ್ ಕೆ.ಟಿ.ಟಿ., ಪ್ರಧಾನ ಕಾರ್ಯದರ್ಶಿ ಯಾಗಿ ಆಶಿಕ್ ಕುಕ್ಕಾಜೆ,
ಜೊತೆ ಕಾರ್ಯದರ್ಶಿಗಳಾಗಿ ಹಮೀದ್ ಗೋಳ್ತಮಜಲು, ಸತ್ತಾರ್ ಕಲ್ಲಡ್ಕ, ಸಫ್ವಾನ್ ಎಸ್.ಆರ್., ಇಮ್ತಿಯಾಝ್ ಕೊಡಾಜೆ, ಸಮೀರ್ ಗೋಳ್ತಮಜಲು, ಕೋಶಾಧಿಕಾರಿ ಯಾಗಿ ಝಮೀರ್ ಕಲ್ಲಡ್ಕ, ಮಾದ್ಯಮ ಕಾರ್ಯದರ್ಶಿಯಾಗಿ ಇರ್ಫಾನ್ ಕಲ್ಲಡ್ಕ, ಆಯ್ಕೆ ಸಮಿತಿ ಸದಸ್ಯರುಗಳಾಗಿ ನಝೀರ್ ಕಡಂಬು, ವಹಾಬ್ ಗೂಡಿನಬಳಿ, ಮನ್ಸೂರ್ ಕುಕ್ಕಾಜೆ, ತಫ್ಸೀರ್ ಸಜಿಪ, ಸಹೀದ್ ಕಡಂಬು,
ತ್ವಾಹಿರ್ ಸಜಿಪ, ಸಂಘಟನಾ ಕಾರ್ಯದರ್ಶಿಗಳಾಗಿ ಝಿಯಾನ್ ಗೂಡಿನ ಬಳಿ, ಉನೈಸ್ ನಂದಾವರ, ಹೈದರ್ (ಅದ್ದಿ) ಸುರಿಬೈಲು, ಇಮ್ರಾನ್ ಕೆ.ಸಿ.ರೋಡ್, ಇಬ್ರಾಹಿಂ ಕಲ್ಲಡ್ಕ, ಏರಿಯಾ ಉಸ್ತುವಾರಿಗಳಾಗಿ ಹಾರಿಸ್ ಅಮರ್ (ಗೋಳ್ತಮಜಲು), ಮನ್ಸೂರ್ ನೇರಳಕಟ್ಟೆ (ಮಾಣಿ), ಮುಹಮ್ಮದ್ ಮಮ್ಮು (ಗೂಡಿನ ಬಳಿ), ಜಲೀಲ್ (ನಂದಾವರ), ಶೌಕತ್ ಅಲಿ (ಬಂಟ್ವಾಳ), ನೌಶೀರ್ (ಕೈಕಂಬ), ಬಶೀರ್ ಕಲ್ಪನೆ (ಬೋಳಂತೂರು), ರಿಯಾಝ್ (ಸಜಿಪ), ಇಮ್ರಾನ್ (ಬಿ.ಸಿ.ರೋಡ್)
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಲ್ತಾಫ್ ಹಾಜಿ ಗೋಳ್ತಮಜಲು, ಅಶ್ವರ್, ಶಫೀಕ್, ಸಿದ್ದೀಕ್ ಕೆ.ಸಿ.ರೋಡ್, ಸಲೀಂ ಪರ್ಲೊಟ್ಟು, ಕೆ.ಕೆ. ಸಹೀದ್, ರಶೀದ್ ಬಾಬಾ, ಜಮಾಲ್ (ನಾಚಿ) ಕಲ್ಲಡ್ಕ, ಅಶ್ಫಾಕ್ ಗೋಳ್ತಮಜಲು, ಇರ್ಶಾದ್ ಮೋರ್ನಿಂಗ್ ಸ್ಟಾರ್, ರಿಯಾಝ್ ಬಿ.ಸಿ.ರೋಡ್ ಅವರು ಆಯ್ಕೆಯಾದರು.