ಡೈಲಿ ವಾರ್ತೆ: 25/ಜುಲೈ/2025

ಬಂಟ್ವಾಳ : ಬುರೂಜ್ ಶಾಲಾ ಶಿಕ್ಷಕ – ರಕ್ಷಕ ಸಭೆ

ಬಂಟ್ವಾಳ : ರಝಾನಗರದ ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ನ 2025 -26 ನೇ ಶಿಕ್ಷಕ ರಕ್ಷಕ ಸಂಘದ ಸಭೆ ನಡೆಯಿತು.

ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಅಝೀಝ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ಸರಕಾರಿ ಪದವಿ ಕಾಲೇಜು ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಮಾತನಾಡಿ , ಆಧುನಿಕ ತಂತ್ರಜ್ಞಾನದ ವ್ಯಾಮೋಹ ಬಿಟ್ಟು ಪುಸ್ತಕದ ಕಡೆ ಗಮನ ಕೊಡಿ, ಆರೋಗ್ಯ ಮಾತ್ರ ದೇವರಲ್ಲಿ ಬೇಡಿ ಮತ್ತೆ ಎಲ್ಲವೂ ದೇವರು ನೀಡುವನು ಎಂದರು.

ಮೀಫ್ ವತಿಯಿಂದ ನೀಡುವ ಐಎಎಸ್, ಐಪಿಎಸ್, ಐಎಫ್ಎಸ್ ಕೆಎಸ್ ಪೂರ್ವ ಸಿದ್ದತಾ ಪರೀಕ್ಷಾ ತರಬೇತಿ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.

ವೇದಿಕೆಯಲ್ಲಿ ಸಂಚಾಲಕರಾದ ಶೇಖ್ ರಹ್ಮತ್ತುಲ್ಲಾಹ್, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ರಝೀಯ ಎಸ್.ಪಿ, ಫ್ರೌಡ ಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ ಸಾಲ್ಯಾನ್, ಶಾಲಾ ನಾಯಕಿ ಸನಾ ಶೆಟ್ಟಿ ಉಪಸ್ಥಿತರಿದ್ದರು.

ಇದೇ ವೇಳೆ ಒಲಿಂಪೈಡ್ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ ತೇರ್ಗಡೆಯಾದ ಮೂರನೇ ತರಗತಿಯ ಅಬುಸುಬಹಾನ್, ಎಕ್ಸಲೆಂಟ್ ಅವಾರ್ಡ್ ಪಡೆದ ಮೂರನೇ ತರಗತಿಯ ಪ್ರಿಯೋನ ಡೀಯೋರ ಪಿಂಟೋ, ಹಾಜರಾತಿ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಂದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಎಲ್ಸಿ ಲಸ್ರಾದೋ ಪ್ರಾಸ್ತಾವನೆಗೈದರು. ಶಿಕ್ಷಕಿ ಅನ್ನಪೂರ್ಣೇಶ್ವರಿ ಶೈಕ್ಷಣಿಕ ವರ್ಷದ ಮಾಹಿತಿ ನೀಡಿದರು. ಶೇಖ್ ಜಲಾಲುದ್ದೀನ್ ಸ್ವಾಗತಿಸಿ, ಸಫ್ನಾಝ್ ವಂದಿಸಿದರು.
ದಿವ್ಯ ಹಾಗೂ ಹಾಫಿಳಾ ಕಾರ್ಯಕ್ರಮ ನಿರೂಪಿಸಿದರು.