


ಡೈಲಿ ವಾರ್ತೆ: 25/ಜುಲೈ/2025


ಜೆಸಿಐ ವಲಯ 15 ರ ಸಾಧನಾಶ್ರೀ” ಪ್ರಶಸ್ತಿಗೆ ರಶೀದ್ ವಿಟ್ಲ ಆಯ್ಕೆ

ಬಂಟ್ವಾಳ : ದ.ಕ., ಉಡುಪಿ, ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡ ಜೆಸಿಐ ವಲಯ 15 ರ ವ್ಯವಹಾರ ಸಮ್ಮೇಳನ – 2025ರಲ್ಲಿ ನೀಡಲಾಗುವ “ಸಾಧನಾಶ್ರೀ” ಪ್ರಶಸ್ತಿಗೆ ವಿಟ್ಲ ಜೆಸಿಐಯ ಪೂರ್ವಾಧ್ಯಕ್ಷ , ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಘಟಕಾದ್ಯಕ್ಷ ರಶೀದ್ ವಿಟ್ಲ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಯನ್ನು ಜೆಸಿಐ ಮಡಂತ್ಯಾರ್ ಆತಿಥ್ಯದಲ್ಲಿ ಜುಲೈ 27 ರಂದು ಜರಗುವ “ಮೃದಂಗ -ಸಾಧಕ ಜೆಸಿಗಳ ಸಾಧನೆಯ ತರಂಗ” ಕಾರ್ಯಕ್ರಮದಲ್ಲಿ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.