ಡೈಲಿ ವಾರ್ತೆ: 28/ಜುಲೈ/2025

ಬಂಟ್ವಾಳ : ತೌಹೀದ್ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕ-ರಕ್ಷಕ ಸಂಘದ ಮಹಾಸಭೆ

ಬಂಟ್ವಾಳ : ತೌಹಿದ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ-ರಕ್ಷಕ ಸಂಘದ ಸಭೆಯು ಇತ್ತೀಚೆಗೆ ಶಾಲೆಯಲ್ಲಿ ನಡೆಯಿತು.

ಬಂಟ್ವಾಳ ಜುಮಾ ಮಸೀದಿ ಖತೀಬ್ ಅಬ್ದುಲ್ ಸಲಾ೦ ಯಮಾನಿ ಉದ್ಘಾಟಿಸಿದರು. ಅಡ್ವಕೇಟ್ ರಿಯಾಜ್ ಹುಸೇನ್ ಅಧ್ಯಕ್ಷತೆ ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕಂಕನಾಡಿ ಇಕ್ರಾ ಅರೇಬಿಕ್ ಕಾಲೇಜಿನ ಮೊಹಮ್ಮದ್ ಫರ್ಹಾನ್ ನದ್ವಿ ಮಾತನಾಡಿ, ಮನೆಯೇ ಮಕ್ಕಳ ಮೊದಲ ಪಾಠ ಶಾಲೆಯಾಗಿದ್ದು, ಅವರ ಸುಸಂಸ್ಕೃತ ಜೀವನ ಆರಂಭವಾಗುವುದು ಮನೆಯಿಂದಲೇ ಎಂದರು.

ಇದೇ ವೇಳೆ 2024-2025 ನೇ ಸಾಲಿನಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ 30 ವಿದ್ಯಾರ್ಥಿಗಳನ್ನು ಹಾಗೂ ಎಸ್ಸೆಸ್ಸೆಲ್ಸಿ
ಯ ಶಿಕ್ಷಕರನ್ನು ಅಭಿನಂದಿಸಲಾಯಿತು.

ಶಾಲಾ ಸಂಚಾಲಕ ಹಾಜಿ ಅಬ್ದುಲ್ ರಹಿಮಾನ್, ಕೋಶಾಧಿಕಾರಿ ಜಿ . ಎಮ್.ಇಮ್ರಾನ್, ಮಸೀದಿ ಅಧ್ಯಕ್ಷ ಪಿ.ಬಿ.ಇಸ್ಮಾಯಿಲ್, ಶಿಕ್ಷಕ-ರಕ್ಷಕ ಸಂಘದ ನಿಕಟ ಪೂರ್ವ ಅಧ್ಯಕ್ಷ ಮೊಹಮ್ಮದ್ ಮುಸ್ತಫಾ, ಕೋಶಾಧಿಕಾರಿ ಮೊಹಮದ್ ಇಕ್ಬಾಲ್, ಮಾಜಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಮೊಹಮದ್ ಹನೀಫ್, ಮದರಸ ಮುಖ್ಯ ಶಿಕ್ಷಕ ಮಜೀದ್ ಫೈಝಿ, ಶಾಲಾ ಆಡಳಿತ ಮಂಡಳಿ ಸದಸ್ಯರಾದ ಉಬೈದುಲ್ಲಾ, ಹಾರೂನ್ ರಶೀದ್ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕ ಇಬ್ರಾಹಿಂ ಸಲೀಂ ಪ್ರಸ್ತಾವನೆಗೈದರು, ಸಹ ಶಿಕ್ಷಕಿ ಅಸ್ಮ ಶಿಕ್ಷಕ ರಕ್ಷಕ ಸಂಘದ ವರದಿ ವಾಚಿಸಿದರು. ಮುಅಲ್ಲಿಂ ಮಜೀದ್ ದಾರಿಮಿ ಮದ್ರಸ ಶಿಕ್ಷಣದ ಕುರಿತು ವಿವರಿಸಿದರು.

ಕಾರ್ಯದರ್ಶಿ ಖಾದರ್ ಮಾಸ್ಟರ್ ಸ್ವಾಗತಿಸಿ, ಸಹ ಮುಖ್ಯ ಶಿಕ್ಷಕಿ ರಚನ ವಂದಿಸಿದರು. ನಿಶ್ಮಿತಾ ಹಾಗೂ ಅನ್ಸಿಫಾ ಕಾರ್ಯಕ್ರಮ ನಿರೂಪಿಸಿದರು.