ಡೈಲಿ ವಾರ್ತೆ: 28/ಜುಲೈ/2025

ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಭುವನೇಶ್ ಪಚ್ಚಿನಡ್ಕ ಆಯ್ಕೆ

ಬಂಟ್ವಾಳ : ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಮುಂದಿನ ಎರಡು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಭುವನೇಶ್ ಪಚ್ಚಿನಡ್ಕ ರವರು ಅವಿರೋಧ ವಾಗಿ ಆಯ್ಕೆಯಾದರು.

ಸಂಘದ ವಿಶೇಷ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಜಯಪ್ರಕಾಶ್ ಜೆ ಎಸ್ ಜಕ್ರಿಬೆಟ್ಟು,
ಪ್ರಧಾನ ಕಾರ್ಯದರ್ಶಿಯಾಗಿ ಶ್ರೀನಿವಾಸ್ ಪೂಜಾರಿ ಮೆಲ್ಕಾರ್,
ಜೊತೆ ಕಾರ್ಯದರ್ಶಿಯಾಗಿ ಆನಂದ್ ಸಾಲಿಯಾನ್ ಶಂಭೂರು,
ಕೋಶಾಧಿಕಾರಿಯಾಗಿ ಸುನೀಲ್ ಕುಂದರ್ ಮೊಡಂಕಾಪು,
ಲೆಕ್ಕ ಪರಿಶೋಧಕರಾಗಿ ಪ್ರಶಾಂತ್ ಕೋಟ್ಯಾನ್ ಸಂಚಯಗಿರಿ ಇವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಿಕಟ ಪೂರ್ವ ಅಧ್ಯಕ್ಷರಾದ ಬಿ.ಸಂಜೀವ ಪೂಜಾರಿ ಗುರುಕೃಪಾ, ಪೂರ್ವಾಧ್ಯಕ್ಷರುಗಳಾದ ಕೆ.ಹರಿಕೃಷ್ಣ ಬಂಟ್ವಾಳ್, ರಾಮಪ್ಪ ಪೂಜಾರಿ ಮಾರ್ನಬೈಲು, ವೀರೇಂದ್ರ ಅಮೀನ್ ವಗ್ಗ, ಸಂಜೀವ ಪೂಜಾರಿ ಕುಚ್ಚಿಗುಡ್ಡೆ, ಸತೀಶ್ ಬಿ. ಮಿತ್ತಬೈಲ್,

ರಮೇಶ್ ತುಂಬೆ, ಗೋಪಾಲ್ ಪೂಜಾರಿ ಕಣೆಜಾಲು, ಬೇಬಿ ಕುಂದರ್ ಅಜ್ಜಿಬೆಟ್ಟು, ಲೋಕೇಶ್ ಕೋಟ್ಯಾನ್ ಎಕ್ಕುಡೇಲ್,
ರಾಮಚಂದ್ರ ಸುವರ್ಣ ತುಂಬೆ,
ಗಣೇಶ್ ಪೂಜಾರಿ ಪೂಂಜಾರೆಕೋಡಿ,
ಹರೀಶ್ ಕೋಟ್ಯಾನ್ ಕುದನೆ,
ರಾಜೇಶ್ ಸುವರ್ಣ ರಾಜಲಕ್ಷ್ಮಿ,
ಪ್ರೇಮನಾಥ್ ಅಜೆಕಲ, ಭವಾನಿ ಕೆ ಮಾರ್ನಬೈಲ್, ಸತೀಶ್ ಪೂಜಾರಿ ಸಿದ್ದಕಟ್ಟೆ, ರೇವತಿ ರತ್ನಾಕರ್ ಬಡಗಬೆಳ್ಳೂರು, ಸತೀಶ್ ಕುಮಾರ್ ಅಮರ್ ರೆಸಿಡೆನ್ಸಿ, ಶಂಕರ್ ಪೂಜಾರಿ ಕಾಯೆರ್ ಮಾರ್,
ಹೇಮಂತ್ ಕುಮಾರ್ ಮೂರ್ಜೆ,
ಜಗದೀಶ್ ಕೊಯಿಲ, ಆಯ್ಕೆಯಾದರು

ಚುನಾವಣಾಧಿಕಾರಿ ಮಹಾಬಲ ಬಂಗೇರ ಅವರು ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.