


ಡೈಲಿ ವಾರ್ತೆ: 30/ಜುಲೈ/2025


ಸ್ಲೀಪರ್ ಕೋಚ್, ಶೌಚಾಲಯ ಸಹಿತ ಅತ್ಯಾಾಧುನಿಕ ಸೌಲಭ್ಯಗಳೊಂದಿಗೆ ‘ಶ್ರೀ ಸನ್ನಿಧಿ ಟ್ರಾಾವೆಲ್ಸ್’ ಬಸ್ ಆಗಸ್ಟ್ 02 ರಿಂದ ಮಂಗಳೂರು ಮಂತ್ರಾಲಯ ಯಾನ ಆರಂಭ

ಕುಂದಾಪುರ: ಕುಂದಾಪುರದ ಎಸ್.ಎಸ್. ಶೆಟ್ಟಿ ಸಮೂಹ ಸಂಸ್ಥೆಯ ಅಂಗ ಸಂಸ್ಥೆಯಾದ ‘ಶ್ರೀ ಸನ್ನಿಧಿ ಟ್ರಾಾವೆಲ್ಸ್’ ವತಿಯಿಂದ ಶೌಚಾಲಯ ಸಹಿತ ಅತ್ಯಾಧುನಿಕ ಸೌಲಭ್ಯಗಳಿರುವ ನೂತನ 2 ಬಸ್‌ಗಳು ಆಗಸ್ಟ್ 02 ರಂದು ಮಂಗಳೂರು-ಮಂತ್ರಾಾಲಯ ಯಾನ ಆರಂಭಿಸಲಿವೆ.

ಸನ್ನಿಧಿ ಟ್ರಾವೆಲ್ಸ್ ಆ್ಯಪ್ ಮೂಲಕ ಟಿಕೆಟ್ ಖರೀದಿಸಿದರೆ ಶೇ.15, ಸನ್ನಿಧಿ ಟ್ರಾವೆಲ್ಸ್ ವೆಬ್‌ಸೈಟ್ ಮೂಲಕ ಮುಂಗಡ ಟಿಕೆಟ್ ಕಾದಿರಿಸಿದರೆ ಶೇ.10 ರಿಯಾಯಿತಿ ಪಡೆಯಬಹುದು.
ವಾರಾಂತ್ಯ, ಹಬ್ಬಹರಿ ದಿನಗಳಲ್ಲೂ ಪ್ರಯಾಣ ದರದಲ್ಲಿ ಏರಿಕೆ ಇರುವುದಿಲ್ಲ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರ ಹಾಗೂ ಅಂತರ್ ರಾಜ್ಯಗಳಿಗೂ ಬಸ್ ಸಂಚರಿಸಲಿವೆ. ಬೆಂಗಳೂರಿಗೆ ಹಗಲು ಪ್ರಯಾಣ ಆರಂಭವಾಗಲಿದೆ ಎಂದು ಸಂಸ್ಥೆಯ ಪಾಲುದಾರ ಶ್ರೀ ಸತೀಶ್ ಶೆಟ್ಟಿ ಹಾಗೂ ಶ್ರೀ ಸನ್ನಿಧಿ ಶೆಟ್ಟಿಯವರು ತಿಳಿಸಿದ್ದಾರೆ.
ವಿಶೇಷ ವಿನ್ಯಾಸ
ಸ್ಲೀಪರ್ ಕೋಚ್, ಅತ್ಯಾಾಧುನಿಕ ಸೌಲಭ್ಯಗಳೊಂದಿಗೆ ವಿಶೇಷವಾಗಿ ವಿನ್ಯಾಸಪಡಿಸಿ ಕರಾವಳಿ ಕರ್ನಾಟಕದಲ್ಲಿ ಬಾರಿಗೆ ಮೂತ್ರಾಲಯದೊಂದಿಗೆ ಶೌಚಾಲಯ ಸೌಲಭ್ಯವನ್ನೂ ಈ ಬಸ್ ಒಳಗೊಂಡಿದೆ. ಪ್ರಯಾಣಿಕರ ಸುರಕ್ಷೆಗೆ ಗರಿಷ್ಠ ಆದ್ಯತೆ ನೀಡಲಾಗಿದ್ದು, 24 ಗಂಟೆ ಕಾರ್ಯನಿರ್ವಹಿಸುವ ಸಹಾಯವಾಣಿ, ಜಿಪಿಎಸ್, ಸಿಸಿ ಕೆಮರಾ ಸಹಿತ ಬಸ್‌ಗಳನ್ನು ವಿನ್ಯಾಸಗೊಳಿಸಲಾಗಿದೆ
ನೂತನ ಬಸ್‌ಗಳ ಮೆರವಣಿಗೆ :
ಮಂಗಳೂರಿನಿಂದ ಮಂತ್ರಾಲಯಕ್ಕೆ ತೆರಳುವ ನೂತನ ಬಸ್ಸುಗಳಿಗೆ ಕೋಟೇಶ್ವರದಲ್ಲಿ ಪೂಜೆ ಸಲ್ಲಿಸಿ ಕೋಟೇಶ್ವರದಿಂದ ಕುಂದಾಪುರದವರೆಗೆ ಮೆರವಣಿಗೆ ಮಾಡಿ ಅನಾವರಣಗೊಳಿಸಲಾಯಿತು.
ಬಸ್ ಯಾನ ಮಾಡಲಿಚ್ಛಿಸುವವರು ವೆಬ್‌ಸೈಟ್: www.shreesannidhitravels.com ಸನ್ನಿಧಿ ಟ್ರಾವೆಲ್ಸ್ ಆ್ಯಪ್, ರೆಡ್‌ಬಸ್, ಅಬಿಬಸ್, ಟ್ರಾವೆಲ್ಯಾರಿ, ಪೇಟಿಎಂ, ಪ್ಲ್ಲಿಪ್‌ಕಾರ್ಟ್ ಮೂಲಕ ಮುಂಗಡ ಟಿಕೆಟ್ ಕಾದಿರಿಸಬಹುದು.