


ಡೈಲಿ ವಾರ್ತೆ: 29/ಜುಲೈ/2025


ಉತ್ತಮ ಅಭಿವೃದ್ಧಿಯೊಂದಿಗೆ ಅವಧಿ ಪೂರ್ಣಗೊಳಿಸಿದ ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿ – ವಕ್ಫ್ ಅಧ್ಯಕ್ಷ ಸಿ.ಹೆಚ್. ಅಬ್ದುಲ್ ಮುತ್ತಲಿ ವಂಡ್ಸೆ

ಉಡುಪಿ: ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಇದರ ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯು 2022 ಆಗಸ್ಟ್ 2 ರಂದು ಅಧ್ಯಕ್ಷರಾಗಿರುವ ಸಿ.ಹೆಚ್. ಅಬ್ದುಲ್ ಮುತ್ತಲಿ ವಂಡ್ಸೆ ಸೇರಿ 21 ಸದಸ್ಯರಿರುವ ಹೊಸ ಸಮಿತಿಯನ್ನು ರಾಜ್ಯ ವಕ್ಫ್ ಬೋರ್ಡ್ ನೇಮಕ ಮಾಡಿದ್ದು ಈ ಸಲಹಾ ಸಮಿತಿಯು ಕಳೆದ ಮೂರು ವರ್ಷಗಳಿಂದ ಸಲ್ಲಿಸಿದ ಸೇವೆಗಳ ಸಂಕ್ಷಿಪ್ತ ವರದಿ ಈ ಕೆಳಗಿನಂತಿದೆ.






ಮಸೀದಿ ಕಟ್ಟಡ ಕಾಮಗಾರಿಯ ಅಭಿವೃದ್ಧಿಗೆ, ದಫನ ಭೂಮಿಯ ಕಾಂಪೌಂಡ್ ಹಾಗೂ ದರ್ಗಾ ಅಭಿವೃದ್ಧಿಗಾಗಿ ವಕ್ಫ್ ಇಲಾಖೆಯಿಂದ ಜಿಲ್ಲಾ ವಕ್ಫ್ ಸಲಹಾ ಸಮಿತಿ ಮೂಲಕ ರಾಜ್ಯ ಸರಕಾರದಿಂದ ಅನುದಾನ ನೀಡಲ್ಪಟ್ಟ ಒಟ್ಟು ಮೊತ್ತ ಮೂರು ಕೋಟಿ ಮೂವತ್ತಾರು ಲಕ್ಷ ಹಾಗೂ ಮದರಸ ಆಧುನೀಕರಣ ಹಾಗೂ ಔಪಚಾರಿಕ ಶಿಕ್ಷಣಕ್ಕಾಗಿ ಬಿಡುಗಡೆ ಗೊಳಿಸಿದ ಅನುದಾನದ ಮೊತ್ತ ಒಂದು ಕೋಟಿ ನಲುವತ್ತರೆಡು ಲಕ್ಷ ಆಗಿರುತ್ತದೆ.
ನಾಲ್ಕು ಕೋಟಿ ಎಂಬತ್ತು ಲಕ್ಷದ ಮಹಿಳಾ ಕಾಲೇಜು ಕುಂದಾಪುರ ತಾಲೂಕಿನ ಗುಲ್ವಾಡಿಗೆ ಮಂಜೂರಾಗಿದ್ದು ಅಲ್ಲದೆ ಜಿಲ್ಲೆಯ ಎಂಟು ಮಸೀದಿಗಳಿಗೆ ಮೃತದೇಹ ಫ್ರೀಜರ್ ಅನ್ನು ನೀಡಲಾಗಿದೆ.

ವಕ್ಫ್ ಅಧೀನ ಸಂಸ್ಥೆಗಳ ಹಲವು ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ನಲುವತ್ತೆಂಟು ಆಡಳಿತ ಸಮಿತಿಯನ್ನೂ ಮೂವತ್ತನಾಲ್ಕು ವಕ್ಫ್ ಸಂವಿಧಾನವನ್ನೂ ರಚಿಸಲು ಸಾಧ್ಯವಾಗಿದೆ.




ಅಲ್ಲದೆ ಉಡುಪಿ ಜಿಲ್ಲೆಗೊಳಪಟ್ಟ ವಕ್ಫ್ ಅಧೀನ ಸಂಘ – ಸಂಸ್ಥೆಗಳ ದಾಖಲೆಗಳ ಪರಿಶೀಲನಾ ಅಭಿಯಾನವು ಏಳು ತಾಲೂಕುಗಳಲ್ಲಿ ನಡೆಸಲಾಗಿದ್ದು. ಈ ಒಂದು ಪರಿಶೀಲನಾ ಅಭಿಯಾನವು ಸರ್ವರ ಪ್ರಶಂಸೆಗೆ ಪಾತ್ರವಾಗಿದೆ. ಅಲ್ಲದೆ ವಕ್ಫ್ ಕಛೇರಿಗೆ ಭೇಟಿ ನೀಡುವ ಆಡಳಿತ ಮಂಡಳಿಗಳ ಸಂಖ್ಯೆಯೂ ಹೆಚ್ಚಾಗಿದೆ.
ಈ ಎಲ್ಲಾ ಸೇವೆಗಳಿಗೆ ಅನುದಾನಗಳನ್ನು ಬಿಡುಗಡೆ ಹಾಗೂ ಇನ್ನಿತರ ವ್ಯವಸ್ಥೆಗಳನ್ನು ನೀಡಿ ನಮ್ಮ ವಕ್ಫ್ ಸಲಹಾ ಸಮಿತಿಗೆ ಸಂಪೂರ್ಣವಾಗಿ ಸಹಕರಿಸಿದ ಕರ್ನಾಟಕ ರಾಜ್ಯ ವಕ್ಫ್ ಸಚಿವರಾದ ಜನಾಬ್ ಬಿ ಝಡ್ ಝಮೀರ್ ಅಹ್ಮದ್, ರಾಜ್ಯ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷರುಗಳಾದ ಬಹು ಎನ್ ಕೆ ಎಮ್ ಶಾಫಿ ಸಅದಿ, ಜನಾಬ್ ಅನ್ವರ್ ಬಾಷಾ ವಕ್ಫ್ ಉಡುಪಿ ಜಿಲ್ಲಾ ಮಾಜಿ ಉಸ್ತುವಾರಿ ಹಾಗೂ ಮಾಜಿ ರಾಜ್ಯ ಸದಸ್ಯ ಜಿ ಯಹ್ಕೂಬ್ ಯೂಸುಫ್, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಸಯ್ಯದ್ ಹುಸೈನ್ ಅಲಿ ಅಲ್ ಹುಸೈನಿ ಹಾಗೂ ಹಾಲಿ ಮತ್ತು ರಾಜ್ಯ ವಕ್ಫ್ ಬೋರ್ಡ್ ಸಮಿತಿಯ ನಾಯಕರು ನಮ್ಮ ನಿರಂತರ ಸೇವೆಗೆ ನಮ್ಮೊಂದಿಗೆ ಕೈಜೋಡಿಸಿದ ಜಿಲ್ಲಾವಕ್ಫ್ ಅಧಿಕಾರಿಗಳು ಸಮಿತಿಯ ಉಪಾಧ್ಯಕ್ಷರುಗಳು ಹಾಗೂ ಸರ್ವಸದಸ್ಯರುಗಳಿಗೆ
ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ಸಿ ಹೆಚ್ ಅಬ್ದುಲ್ ಮುತ್ತಲಿ ವಂಡ್ಸೆ ರವರು
ಹೃದಯಾಂತರಾಳದ ಅಭಿನಂದನೆಯನ್ನು ಸಲ್ಲಿಸಿದ್ದಾರೆ.