ಡೈಲಿ ವಾರ್ತೆ: 02/ಆಗಸ್ಟ್/ 2025

ಧರ್ಮಸ್ಥಳ ಶವ ಹೂತ ಪ್ರಕರಣ: ದೂರು ವಾಪಸ್ ಪಡೆಯಲು ಅನಾಮಿಕನಿಗೆ ಇನ್ಸ್‌ಪೆಕ್ಟರ್‌ನಿಂದ ಒತ್ತಡ ಆರೋಪ: ಇಂದು SIT ತನಿಖೆ ವೇಳೆ ಕಂಡುಬಾರದ ಅಧಿಕಾರಿ!

ಧರ್ಮಸ್ಥಳ: ನೂರಾರು ಶವ ಹೂಳಿದ್ದೇನೆ ಎಂದು ದೂರದಾರನ ಹೇಳಿಕೆ ಮೇಲೆ ಎಸ್‌ಐಟಿ ಕಳೆದ 4 ದಿನಗಳ ನೆಲ ಅಗೆಯುವ ಕಾರ್ಯ ಪೂರ್ಣಗೊಳಿಸಿದ್ದು, ಶುಕ್ರವಾರ ಯಾವುದೇ ಕುರುಹು ಸಿಕ್ಕಿಲ್ಲ. ಶನಿವಾರ ಮಳೆ ನಡುವೆಯೇ 9ನೇ ಪಾಯಿಂಟ್‌ನಲ್ಲಿ ಅಗೆಯುವ ಕೆಲಸ ಆರಂಭ ಆಗಿದೆ.

ಶುಕ್ರವಾರ ಶೋಧಕಾರ್ಯ ಮುಗಿದ ಬಳಿಕ, ಎಸ್‌ಐಟಿ ತನಿಖೆಯಲ್ಲಿ ನಿಯೋಜಿಸಿದ್ದ ಇನ್ಸ್‌ಪೆಕ್ಟರ್ ಮಂಜುನಾಥ್ ದೂರುದಾರನಿಗೆ ಬೆದರಿಕೆ ಒಡ್ಡಿದ್ದಾರೆ. ಶವ ಹೂತ ಪ್ರಕರಣದ ದೂರನ್ನು ಹಿಂಪಡೆಯಬೇಕು, ಇಲ್ಲವಾದಲ್ಲಿ ನೀನು ಜೈಲು ಪಾಲಾಗು ಸಾಧ್ಯತೆ ಇದೆ ಎಂದು ಇನ್ಸ್ಪೆಕ್ಟರ್ ಬೆದರಿಕೆ ಹಾಕಿದ್ದಾರೆಂದು ದೂರುದಾರನ ಪರ ವಕೀಲ ಆರೋಪಿಸಿದ್ದಾರೆ.

ಆದರೆ ದೂರುದಾರನ ಈ ಆರೋಪ ನಿರಾಧಾರ ಎಂದು ಎಸ್‌ಐಟಿ ಅಧಿಕಾರಿಗಳು ತಳ್ಳಿಹಾಕಿದ್ದಾರೆ ಎನ್ನಲಾಗಿದೆ.
ಇನ್ನು ಇಂದು ತನಿಖಾ ಸ್ಥಳದಲ್ಲಿ ಇನ್ಸ್ ಪೆಕ್ಟರ್ ಮಂಜುನಾಥ್ ಕೂಡಾ ಕಂಡುಬರಲಿಲ್ಲ. ಹೀಗಾಗಿ ದೂರುದಾರನ ಆರೋಪದ ಬಗ್ಗೆ ಕುತೂಹಲ ಮೂಡಿವೆ.

ಈಗಾಗಲೇ ಎಂಟು ಕಡೆಗಳಲ್ಲಿ ಶೋಧಕಾರ್ಯ ನಡೆಸಲಾಗಿದೆ. 6 ನೇ ಪಾಯಿಂಟ್ ನಲ್ಲಿ ಮಾತ್ರ ಮೂಳೆಗಳು ಸಿಕ್ಕಿದ್ದವು. ಆದರೆ ಉಳಿದ ಯಾವುದೇ ಸ್ಥಳದಲ್ಲಿ ಕುರುಹು ಸಿಕ್ಕಿಲ್ಲ.