ಡೈಲಿ ವಾರ್ತೆ: 03/ಆಗಸ್ಟ್/ 2025

ರಾಯಚೂರು| ಕಲ್ಲಿಗೆ ಡಿಕ್ಕಿ ಹೊಡೆದ ಕಾರು ಪಲ್ಟಿ – ಬೀಜಾಡಿ ಮೂಲದ ಮಹಿಳೆ ಸ್ಥಳದಲ್ಲೇ ಸಾವು!

ರಾಯಚೂರು: ರಾಯಚೂರಿನಲ್ಲಿ ಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿಯಾಗಿ ಕುಂದಾಪುರ ತಾಲೂಕಿನ ಬೀಜಾಡಿಯ ಮೂಲದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಶನಿವಾರ ರಾಯಚೂರು ನಗರದ ಮುನ್ಸಲಾಪುರ ಕ್ರಾಸ್ ಬಳಿ ಸಂಭವಿಸದೆ.

ಮೃತ ಮಹಿಳೆ ಹಾಜೀರಾ (65) ಎಂದು ಗುರುತಿಸಲಾಗಿದೆ. ಇವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮದ ಬೀಜಾಡಿ ನಿವಾಸಿ ಎಂದು ತಿಳಿದು ಬಂದಿದೆ.

ಉದ್ಯಮಿ ಹಾಲಾಡಿ ಅಬ್ದುಲ್ಲಾ ಅವರ ಪತ್ನಿ ಹಾಜಿರಾ ಮಗ ಇಮ್ರಾನ್ ಮತ್ತು ಸೊಸೆ ಸಾರಾ ಹಾಗೂ ಮಗನ ಮೂವರು ಗಂಡು ಮಕ್ಕಳೊಂದಿಗೆ ಆ. 2 ರಂದು ಹೈದ್ರಾಬಾದ್‌ಗೆ ಪ್ರವಾಸಕ್ಕೆ ಹೊರಟಿದ್ದು ಕುಂದಾಪುರ, ಹುಬ್ಬಳ್ಳಿ, ಸಿಂಧನೂರು, ರಾಯಚೂರು ಮಾರ್ಗವಾಗಿ ಹೋಗುವಾಗ ರಾಯಚೂರು ನಗರದ ಮುನ್ಸಲಾಪುರ ಕ್ರಾಸ್ ಬಳಿ ಮುಂಜಾನೆ ರಸ್ತೆ ಬದಿಯಲ್ಲಿರುವ ಕಲ್ಲಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದೆ.

ಗಂಭೀರ ಗಾಯಗೊಂಡ ಇಶಾನ್ ಅಬ್ದುಲ್, ಇಲಾನ್, ಇಸ್ಮಾಯಿಲ್, ಮಹಮದ್ ಇಜಾನ, ಮಹಮದ್ ಇಮ್ರಾನ್ ಎಂಬುವವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶನಿವಾರ ತಡರಾತ್ರಿ ಹಾಜೀರಾ ಅವರ ಮೃತದೇಹ ಬೀಜಾಡಿಗೆ ತರಲಾಯಿತು. ಭಾನುವಾರ ಬೆಳಿಗ್ಗೆ ಹಂಗಳೂರು ಮಸೀದಿಯಲ್ಲಿ ಅಂತ್ಯ ಸಂಸ್ಕಾರ ನಡೆಯಿತು.