


ಡೈಲಿ ವಾರ್ತೆ: 07/ಆಗಸ್ಟ್/ 2025


ಶಾಸಕ ಸುನಿಲ್ ಕುಮಾರ್ ಹಾಗೂ ಯಶ್ಪಾಲ್ ಸುವರ್ಣ ಅವರಿಂದ ಧರ್ಮಸ್ಥಳ ವಿಚಾರದಲ್ಲಿ ಕೋಮು ಸಂಘರ್ಷ ಮಾಡಲು ಯತ್ನ – ಕೋಟ ನಾಗೇಂದ್ರ ಪುತ್ರನ್

ಉಡುಪಿ: ಧರ್ಮಸ್ಥಳ ವಿಚಾರದಲ್ಲಿ ಪಕ್ಷಾತೀತವಾಗಿ ನಡೆಯುತ್ತಿರುವ ತನಿಖೆಯನ್ನು ಕೋಮು ಸಂಘರ್ಷ ಮಾಡಲು ಹೊರಟು ಕಾರ್ಕಳ ಹಾಗೂ ಉಡುಪಿ ಶಾಸಕರು ರಾಜಕೀಯ ಲಾಭ ಪಡೆದು ಕೊಳ್ಳಲು ಪ್ರಯತ್ನಿಸುತ್ತಿರುವುದು ಹಿಂದೂ ಧರ್ಮಕ್ಕೆ ಮಾಡಿದ ದೊಡ್ಡ ಅಪಮಾನ.
ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ನಮ್ಮ ಪವಿತ್ರ ಕ್ಷೇತ್ರದ ಬಗ್ಗೆ ನಾವು ಅಗಾದವಾದ ನಂಬಿಕೆ ಇಟ್ಟು ಕೊಂಡವರು.
ಇಲ್ಲಿ ಯಾವುದೇ ಪಕ್ಷ ಬರೋದಿಲ್ಲ, ಶಾಸಕ ಸುನಿಲ್ ಕುಮಾರ್ ಹಾಗೂ ಯಶ್ಪಾಲ್ ಸುವರ್ಣ ಹುಟ್ಟುವ ಮಾದಲೇ ಪಕ್ಷತೀತವಾಗಿ ಧರ್ಮಸ್ಥಳ ಕ್ಷೇತ್ರಕ್ಕೆ ಗೌರವ ಕೊಟ್ಟು ಹಿಂದೂ ಧರ್ಮದ ಪರಂಪರೆಯನ್ನು ಉಳಿಸಿ ಕೊಂಡು ಬಂದವರು ಹಿಂದೂಗಳು.
ಈ ಇಬ್ಬರು ಶಾಸಕರು ರಾಜಕೀಯ ಮಾಡಲೆಂದು ಹುಟ್ಟಿಕೊಂಡಿರುವ ಹಾಗೆ ಇದೆ.
ಇವರಿಗೆ ಧರ್ಮದ ಮೇಲೆ ಗೌರವ ಇಲ್ಲ ಅಧಿಕಾರದ ಮೇಲೆ ವ್ಯಾಮೋಹ ಇರುವುದರಿಂದ ಧರ್ಮಸ್ಥಳ ವಿಚಾರವನ್ನು ಬೇರೆ ಬೇರೆ ಪಕ್ಷದ ತಲೆಗೆ ಕಟ್ಟುವ ಹೇಳಿಕೆ ನೀಡುತ್ತಿದ್ದಾರೆ.
ಧರ್ಮಸ್ಥಳ ಮಂಜುನಾಥ ಹಾಗೂ ಅಣ್ಣಪ್ಪ ಸ್ವಾಮಿ ಬಗ್ಗೆ ನಮಗೆ ಹಾಗೂ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಅಗಾದವಾದ ನಂಬಿಕೆ ಮತ್ತು ಭಕ್ತಿ ಇದೆ. ಆದರೆ ನಿಮ್ಮ ಈ ಹೊಲಸು ಹೇಳಿಕೆಗಳು ನಿಮ್ಮ ದುಷ್ಟ ಬುದ್ದಿಯನ್ನು ಸಮಾಜದ ಮುಂದೆ ತೋರಿಸುತ್ತಿದೆ.
ಸುನಿಲ್ ಕುಮಾರ್ ಹಿಂದೂ ಧರ್ಮದ ಬಗ್ಗೆ ಮಾತನಾಡುವ ಮೊದಲು ಉಮ್ಮಿ ಕಲ್ಲು ಬೆಟ್ಟವನ್ನು ಬೈಲೂರಿನಲ್ಲಿ ನಿಂತು ಒಮ್ಮೆ ನೋಡಲಿ ಆಗ ಹಿಂದೂ ಧರ್ಮಕ್ಕೆ ಮಾಡಿದ ಅಪಮಾನ ಅರಿವು ಆಗಬಹುದು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಕೋಟ ನಾಗೇಂದ್ರ ಪುತ್ರನ್ ಕಿಡಿಕಾರಿದ್ದಾರೆ.