ಡೈಲಿ ವಾರ್ತೆ: 11/ಆಗಸ್ಟ್/ 2025

ಪುತ್ತೂರು: ತಾಮ್ರದ ಗಂಟೆ ಕಳವು ಪ್ರಕರಣ ಆರೋಪಿ ಬಂಧನ

ಪುತ್ತೂರು: ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಸುಮಾರು 10 ಕೆಜಿ ತೂಕದ ಸುಮಾರು 8000/- ರೂ ಬೆಲೆ ಬಾಳುವ ತಾಮ್ರದ ಗಂಟೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಪುತ್ತೂರು, ಕಬಕ ನಿವಾಸಿ ಸಂಶುದ್ದೀನ್ @ ಸಂಶು (50) ಎಂದು ಗುರುತಿಸಲಾಗಿದೆ.

ಆರೋಪಿಯು ಪುತ್ತೂರು ನಗರ ಠಾಣಾ ಅ.ಕ್ರ 83/2004, ಕಲಂ: 454, 380 ಐಪಿಸಿ ಪ್ರಕರಣದಲ್ಲೂ ಆರೋಪಿಯಾಗಿರುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.