


ಡೈಲಿ ವಾರ್ತೆ: 12/ಆಗಸ್ಟ್/ 2025


ಶಂಭೂರು : ಶಾಲೆಯಲ್ಲಿ ಆಟಿಡ್ ಒಂಜಿ ದಿನ

ಬಂಟ್ವಾಳ : ಶಂಭೂರು ಶಾಲೆಯ ಅಂಗನವಾಡಿಯಲ್ಲಿ ‘ಆಟಿಡ್ ಒಂಜಿ ದಿನ’ ಹಾಗೂ ಸ್ತನ್ಯಪಾನ ಶಿಬಿರ ಏರ್ಪಡಿಸಲಾಗಿತ್ತು.

ಅಂಗನವಾಡಿಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸೂಕ್ಷಿತ್ ಉದ್ಘಾಟಿಸಿದರು. ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಲೀಲಾವತಿ ತಮ್ಮ ಇಲಾಖೆಯಿಂದ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳ ಬಗ್ಗೆ ಹೇಳಿ ಸ್ತ್ರೀಶಕ್ತಿ ಗುಂಪುಗಳು ಬೆಳೆದು ಬಂದ ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆರೋಗ್ಯ ಇಲಾಖೆಯ ಸಿ.ಎಚ್.ಡಿ ಪವಿತ್ರ, ಆರೋಗ್ಯ ಕಾರ್ಯಕರ್ತೆ ರಶೀದ ಸ್ತನ್ಯಪಾನದ ಬಗ್ಗೆ ಹಾಗೂ ಮಗುವಿನ ಆರೈಕೆ ಮತ್ತು ಆಹಾರದ ಬಗ್ಗೆ ಮಾಹಿತಿ ನೀಡಿದರು.
ಆಶಾ ಕಾರ್ಯಕರ್ತೆ ಯರಾದ ಪ್ರಮೀಳಾ, ಹೇಮಲತ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ವೇಳೆ ರಶ್ವಿತ್ ಕರುಣಾಕರ ಅವರು ಅಂಗನವಾಡಿಗೆ ಟೇಬಲ್ ಫ್ಯಾನನ್ನು ಹಸ್ತಾಂತರಿಸಿದರು . ಭಾಗ್ಯಲಕ್ಷ್ಮಿ ಗುಂಪಿನಿಂದ ನಿರ್ಗಮಿಸಿದ ಹಿರಿಯ ಸದಸ್ಯೆ ಗೋಪಿ ಅಂಗನವಾಡಿಗೆ ಕೆಲವು ಪಾತ್ರೆಗಳನ್ನು ನೀಡಿದರು.
ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಒಬ್ಬೊಬ್ಬರು ಒಂದೊಂದು ರೀತಿಯ ಆಟಿಯಲ್ಲಿ ಮಾಡುವ ಆಹಾರ ಪದಾರ್ಥಗಳನ್ನು ಮಾಡಿ ತಂದಿದ್ದರು. ಅಂಗನವಾಡಿಯ ಇಬ್ಬರು ಗರ್ಭಿಣಿ ಸದಸ್ಯೆಯರಿಗೆ ಅರಶಿನ ಕುಂಕುಮ ಕೊಟ್ಟು ಹಾರೈಸಲಾಯಿತು.
ಅಂಗನವಾಡಿ ಕೇಂದ್ರದಲ್ಲಿ ಇರುವ ನಾಲ್ಕು ಗುಂಪುಗಳಿಗೆ ಆಟೋಟ ಸ್ಪರ್ದೆಯನ್ನು ಏರ್ಪಡಿಸಲಾಗಿತ್ತು.
ಇದರಲ್ಲಿ ‘ಭಾಗ್ಯಲಕ್ಷ್ಮಿ’ ಗುಂಪಿನಲ್ಲಿ ಪ್ರಥಮ ಬಹುಮಾನ ಭಾರತಿ ಪ್ರಶಾಂತ್ ದ್ವಿತೀಯ ಬಹುಮಾನ ಭಾರತಿ, ಶ್ರಿ ಲಕ್ಷ್ಮಿ ಗುಂಪಿನಲ್ಲಿ ಪ್ರಥಮ ಬಹುಮಾನ ಧನಲಕ್ಷ್ಮಿ, ದ್ವಿತೀಯ ಬಹುಮಾನ ಗಿರಿಜ, ಶ್ರೀದೇವಿ ಗುಂಪಿನಲ್ಲಿ ಪ್ರಥಮ ಗಿರಿಜ, ದ್ವಿತೀಯ ಬಹುಮಾನ ಸರೋಜ, ವರಲಕ್ಷ್ಮಿ ಗುಂಪಿನಲ್ಲಿ ಪ್ರಥಮ ಶಶಿಕಲ ದ್ವಿತೀಯ ಬಹುಮಾನ ಗೀತ ರವರು ಪಡೆದುಕೊಂಡರು.
ಅಂಗನವಾಡಿ ಕಾರ್ಯಕರ್ತೆ ಪ್ರೇಮ ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ಸುನೀತಾ ವಂದಿಸಿದರು.