


ಡೈಲಿ ವಾರ್ತೆ: 12/ಆಗಸ್ಟ್/ 2025


ಯುವ ವಿಚಾರ ವೇದಿಕೆ (ರಿ.) ಉಪ್ಪೂರು ಕೊಳಲಗಿರಿ.
“ರಜತ ಸಂಭ್ರಮ” ಸ್ವಾತಂತ್ರೋತ್ಸವ ಪ್ರಯುಕ್ತ ದೇಶಭಕ್ತಿ ಗೀತೆ ಹಾಗೂ ಕ್ರೀಡಾ ಸ್ಪರ್ಧಾ ಕಾರ್ಯಕ್ರಮ

ಯುವ ವಿಚಾರ ವೇದಿಕೆಯ ರಜತ ಸಂಭ್ರಮದ ಅಂಗವಾಗಿ ಸ್ವಾತಂತ್ರೋತ್ಸವ ಪ್ರಯುಕ್ತ ಕ್ರೀಡಾ ಸ್ಪರ್ಧಾ ಕಾರ್ಯಕ್ರಮ ವೇದಿಕೆ ವಠಾರದಲ್ಲಿ ನಡೆಸಲಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಕೃಷ್ಣಧಾಮದ ಸಂಸ್ಥಾಪಕರು, ಸಮಾಜ ಸೇವಕರು ಹಾಗೂ ಹಿರಿಯರಾದ ಶ್ರೀ ಕೆ. ಟಿ ಜೋಯಿಸ್ ಹಾಗೂ ಉಪ್ಪೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಸಾವಿತ್ರಮ್ಮ ಎಲ್. ಉಪಸ್ಥಿತರಿದ್ದು ಯುವ ವಿಚಾರ ವೇದಿಕೆಯ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರು.ಉಪ್ಪೂರು ವ್ಯ.ಸೇ.ಸ. ಸಂಘದ ನಿರ್ದೇಶಕರಾದ ಶ್ರೀ ರಮೇಶ್ ಕರ್ಕೇರ, ಪ್ರಾಸ್ತಾವಿಕವಾಗಿ ಮಾತನಾಡಿದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸದಾಶಿವ ಕುಮಾರ್ ಕಾರ್ಯಕ್ರದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಿಕೆ ಉಪಾಧ್ಯಕ್ಷರಾದ ಸುಕೇಶ್ ಪಾಣ ವಹಿಸಿದ್ದರು. ಅತಿಥಿಗಳಿಂದ ಸ್ಪರ್ಧಾ ಪರಿಕರ ಹಸ್ತಾಂತರ ಹಾಗೂ ಲೋಟಕ್ಕೆ ಚೆಂಡೆಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಮಕ್ಕಳಿಗೆ, ಮಹಿಳೆಯರು, ಪುರುಷರಿಗೆ ವಿವಿಧ ಪ್ರತ್ಯೇಕ ಸ್ಪರ್ಧೆಗಳನ್ನು ನೆರವೇರಿಸಲಾಯಿತು. ವಿಶೇಷವಾಗಿ ಮಕ್ಕಳಿಗೆ ದೇಶಭಕ್ತಿಗೀತೆ ಸ್ಪರ್ಧೆ ಕೂಡ ನಡೆಸಲಾಯಿತು.

ವೇದಿಕೆಯ ಅವಿನಾಶ್ ಹಾಗೂ ಹೇಮಂತ್ ಅವರ ಸಂಯೋಜನೆಯಿಂದ ಯಶಸ್ವಿಯಾದ ಸ್ಪರ್ಧಾ ಕಾರ್ಯಕ್ರಮ ಶೋಭಾ ಯೋಗೀಶ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ , ಅತಿಥಿ ಗಣ್ಯರಿಗೆ ಕೋಶಾಧಿಕಾರಿ ಅಶೋಕ್ ಅವರು ಸ್ವಾಗತಿಸಿ ಸಾಂಸ್ಕೃತಿಕ ಕಾರ್ಯದರ್ಶಿ ರವೀಂದ್ರ ಕುಮಾರ್ ಸರ್ವರಿಗೂ ವಂದಿಸುವುದರೊಂದಿಗೆ ಮುಕ್ತಾಯವಾಯಿತು ವೇದಿಕೆಯ ಶಶಿಕುಮಾರ್ ಕಾರ್ಯಕ್ರಮ ನಿರೂಪಿಸಿದರು.