ಡೈಲಿ ವಾರ್ತೆ: 12/ಆಗಸ್ಟ್/ 2025

ಕುಂದಾಪುರ| ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೈಲ್ಕೆರೆ ಯಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಪೂರ್ವಭಾವಿ ಸಭೆ

ಕುಂದಾಪುರ| ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೈಲ್ಕೆರೆಯಲ್ಲಿ ಕುಂದಾಪುರ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಟ್ಟದ ಬಾಲಕ ಮತ್ತು ಬಾಲಕಿಯರ ವಾಲಿಬಾಲ್ ಪಂದ್ಯಾಟ ನಡೆಸುವರೇ ಪೂರ್ವಭಾವಿ ಸಭೆಯನ್ನು ಆ.10 ರಂದು ಭಾನುವಾರ ಕರೆಯಲಾಗಿದ್ದು ಶಾಲಾ ಎಸ್.ಡಿ.ಎಂ . ಸಿ.ಅಧ್ಯಕ್ಷರಾದ ಉದಯ ಕೊಠಾರಿ ಇವರು ಸಭೆಯ ಅಧ್ಯಕ್ಷತೆ ವಹಿಸಿದ್ದು ಮುಖ್ಯ ಅತಿಥಿಗಳಾಗಿ ಮೊಳಹಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಚೈತ್ರಾ ವಿವೇಕ್ ಅಡಪ, ಶಾಲಾ ಎಸ್.ಡಿ.ಎಂ.ಸಿ ಮಾಜೀ ಅಧ್ಯಕ್ಷರಾದ ಸುಪ್ರೀತಾ ಶೆಟ್ಟಿ, ಹಿರಿಯ ನಾಗರಿಕರಾದ ಕೃಷ್ಣ ನಾಯ್ಕ, ಮೊಳಹಳ್ಳಿ ಗ್ರಾಮ ಶೌರ್ಯ ಘಟಕದ ಅಧ್ಯಕ್ಷರಾದ ಅಶೋಕ್ ಉಪಸ್ಥಿತರಿದ್ದರು.
ಹಾಗೆಯೇ ಶಾಲಾ ಎಸ್.ಡಿ.ಎಂ.ಸಿ ಸದಸ್ಯರು ‘ಹಳೇ ವಿದ್ಯಾರ್ಥಿಗಳು. ಊರ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಇಲಾಖಾ ನಿಯಮದಂತೆ ಅಚ್ಚುಕಟ್ಟಾಗಿ ನಿರ್ವಹಿಸುವುದೆಂದು ಸರ್ವಾನುಮತದಿಂದ ನಿರ್ಣಯಿಸಲಾಯಿತು.
ಮುಖ್ಯ ಶಿಕ್ಷಕ ವಡ್ಡರ್ಸೆ ಸಂತೋಷ ಶೆಟ್ಟಿ ನೆರೆದಿರುವವರಿಗೆ ಧನ್ಯವಾದ ಸಮರ್ಪಿಸಿದರು.