ಡೈಲಿ ವಾರ್ತೆ: 13/ಆಗಸ್ಟ್/ 2025

ಅಶ್ರಿತ್ ಟ್ರಸ್ಟ್(ರಿ) ಕೋಟ ಹಾಗೂ ಆರಕ್ಷಕ ಠಾಣೆ ಕೋಟ ಮತ್ತು ಎನ್.ಎಸ್.ಎಸ್.ಘಟಕ ಇದರ ವತಿಯಿಂದ ಮಾದಕ ವ್ಯಸನ ಮುಕ್ತ ಅಭಿಯಾನ ಹಾಗೂ ಜನ ಜಾಗೃತಿ ಜಾಥಾ:
ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಹಾದಿಯಲ್ಲಿ ಸಾಗಿದರೆ ಮಾತ್ರ ಉತ್ತಮ ಭವಿಷ್ಯ ನಿರ್ಮಾಣ ಸಾಧ್ಯ – ಡಿವೈಎಸ್ಪಿ ಡಿ. ಟಿ. ಪ್ರಭು

ಕೋಟ: ವಿದ್ಯಾರ್ಥಿ ಜೀವನದಲ್ಲಿ ಗೆಳೆಯರೊಂದಿಗೆ ಸೇರಿ ಮೋಜಿಗಾಗಿ ಮಾದಕ ವಸ್ತುಗಳನ್ನು ಸೇವಿಸುವವರು ಯೌವ್ವನದಲ್ಲಿ ಅದರ ಸಂಪೂರ್ಣ ದಾಸರಾಗುವ ಮೂಲಕ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ.
ಈ ಸಾಮಾಜಿಕ ಪಿಡುಗು ಪ್ರಸ್ತುತ ಸಮಾಜದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರುವುದು ಖೇದಕರವಾಗಿದೆ ಎಂದು ಉಡುಪಿ ಡಿವೈಎಸ್ಪಿ ಡಿಟಿ ಪ್ರಭು ಹೇಳಿದರು.

ಅವರು ಕೋಟ ಅಶ್ರಿತ್ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜ್ ಹಾಗೂ ಕೋಟ ಪೊಲೀಸ್ ಠಾಣೆ, ಎನ್.ಎಸ್.ಎಸ್ ಘಟಕ ವತಿಯಿಂದ ಆ.13 ರಂದು ಬುಧವಾರ ಕೋಟ ಅಮೃತೇಶ್ವರಿ ದೇಗುಲದ ಸಭಾಭವನದಲ್ಲಿ ನಡೆದ ಮಾದಕ ವ್ಯಸನ ಮುಕ್ತ ಅಭಿಯಾನ ಹಾಗೂ ಜನ ಜಾಗೃತಿ ಜಾಥಾ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿ ಪ್ರಸ್ತುತ ಸಮಾಜದಲ್ಲಿ ಹಿರಿಯರು, ಕಿರಿಯರು ಎಂಬ ವಯಸ್ಸಿನ ತಾರತಮ್ಯವಿಲ್ಲದೆ ಜನರು ಮಾದಕ ಪದಾರ್ಥಗಳ ಚಟಕ್ಕೆ ಬಲಿಯಾಗುತ್ತಿದ್ದಾರೆ.

ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಹಾದಿಯಲ್ಲಿ ಸಾಗಿದರೆ ಮಾತ್ರ ಉತ್ತಮ ಭವಿಷ್ಯ ನಿರ್ಮಾಣವಾಗಲಿದೆ. ಆದರೆ ಇಂದು ಮಾದಕ ವಸ್ತುಗಳ ಚಟಕ್ಕೆ ಹೆಚ್ಚಾಗಿ ತುತ್ತಾಗುತ್ತಿರುವುದು ವಿದ್ಯಾರ್ಥಿ ಜೀವನದಲ್ಲಾಗಿದೆ.
ಸಮಾದಲ್ಲಿ ದರೋಡೆ, ಕೊಲೆ, ಗಲಾಬೆ, ಹೆಚ್ಚಳಕ್ಕೆ ಮಾದಕ ವ್ಯಸನವೇ ಪ್ರಮುಖ್ಯ ಕಾರಣವಾಗಿದೆ. ಪುರುಷರಿಗೆ ಸೀಮಿತವಾಗಿದ್ದ ಮಾದಕ ವಸ್ತುಗಳು ಪ್ರಸ್ತುತ ಕೆಲವು ಕಾಲೇಜಿನ ಕ್ಯಾಂಪಸ್‌ಗಳಲ್ಲಿ ಹುಡುಗಿಯರು ಕೂಡಾ ಸೇವಿಸುತ್ತಿದ್ದಾರೆ ಎಂಬ ಸಮೀಕ್ಷೆ ಕಳವಲಕಾರಿಯಾಗಿದೆ ಎಂದು ಡಿವೈಎಸ್ಪಿ ಡಿ. ಟಿ. ಪ್ರಭು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಶ್ರಿತ್ ಟ್ರಸ್ಟ್ (ರಿ) ಇದರ ನಿರ್ದೇಶಕರಾದ ಡಾ.ವಿದ್ಯಾಧರ ಶೆಟ್ಟಿ ಕೆ. ವಹಿಸಿದ್ದರು. ಅವರು ಮಾತನಾಡಿ ಭಾರತದ ಮುಂದಿನ ಭವಿಷ್ಯವಾಗಿರುವ ಯುವಜನತೆ ಮಾದಕ ವ್ಯಸನದಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಅರಿತುಕೊಳ್ಳಬೇಕೆಂಬ ಉದ್ದೇಶದಿಂದ ಜಾಗೃತಿ ನಡಿಗೆ ಆಯೋಜಿಸಿದ್ದೇವೆ. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕೋಟ ಅಶ್ರಿತ್ ನರ್ಸಿಂಗ್ ಕಾಲೇಜ್ ಸದಾ ತಮ್ಮ ಬದ್ಧತೆ ಪ್ರದರ್ಶಿಸುತ್ತಿದ್ದು, ಮುಂದೆಯೂ ಇಂತಹ ಜಾಗೃತಿ ಕಾರ್ಯಕ್ರಮಗಳಿಗೆ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶಿಕ್ಷಕಿ ಶ್ರೀಮತಿ ನವ್ಯಶ್ರೀ ವಿದ್ಯಾರ್ಥಿಗಳಿಗೆ ಮಾದಕ ವ್ಯಸನ ಮುಕ್ತ ಅಭಿಯಾನದ ಪ್ರಮಾಣವಚನ ಬೋಧಿಸಿದರು.

ಈ ಕಾರ್ಯಕ್ರಮದಲ್ಲಿ ಕೋಟ ಪಿಎಸ್ಐ ಸುಧಾ ಪ್ರಭು, ಅಶ್ರಿತ್ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜ್ ಇದರ ಪ್ರಾಂಶುಪಾಲರಾದ ಡಾ. ಮೋಹನ್ ಎಸ್. ಹಾಗೂ ಅಶ್ರಿತ್ ನರ್ಸಿಂಗ್ ಕಾಲೇಜಿನ ಶಿಕ್ಷಕ – ಶಿಕ್ಷಕಿಯರು,ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಅಶ್ರಿತ್ ನರ್ಸಿಂಗ್ ಕಾಲೇಜಿನ ಶಿಕ್ಷಕರಾದ ಮೇಲ್ವಿನ್ ಮಸ್ಕೇರೆನ್ಹಸ್ ರವರು ಅತಿಥಿಗಳನ್ನು ಸ್ವಾಗತಿಸಿದರು.
ಶಿಕ್ಷಕಿ ಭಾಗ್ಯಶ್ರೀ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಕಿ ಆನಿ ಜೆಸಿಂತಾ ಡಿ’‌‌ಸೋಜ ವಂದಿಸಿದರು.