ಡೈಲಿ ವಾರ್ತೆ: 13/ಆಗಸ್ಟ್/ 2025

ಉಡುಪಿ| ತಾಮ್ರದ ಪೈಪ್ ಕಳ್ಳತನ – ಇಬ್ಬರು ಆರೋಪಿಗಳ ಬಂಧನ

ಉಡುಪಿ: ಅಜ್ಜರಕಾಡುವಿನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಆಸ್ಪತ್ರೆಗೆ ಆಕ್ಸಿಜನ್‌ ಪೈಪ್ ಲೈನ್ ಜೋಡಣೆಗೆ ಸ್ಟೋರೂಮ್ ನಲ್ಲಿಟ್ಟಿದ್ದ ಕಾಪರ್ ಪೈಪ್, ಫಿಟಿಂಗ್ಸ್ ಮತ್ತು ಹಳೆ ಕಾಪರ್ ಸ್ಟ್ರಿಪ್ ಗಳನ್ನು ಕಳವು ಮಾಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಮಹಮ್ಮದ್ ಜಾವೀದ್ ( 29)ಮತ್ತು ಸಯ್ಯದ್ ದಾದಾ ಪಿರ್ ಲಿಯಾಕತ್ (28) ಬಂಧಿತರು.
ಇವರಿಂದ ಕಳವು ಮಾಡಿದ್ದ ಒಟ್ಟು 2,81,000 ರೂ. ಮೌಲ್ಯದ ತಾಮ್ರದ ಪೈಪ್ ತುಂಡುಗಳು, ಕೃತ್ಯಕ್ಕೆ ಬಳಸಿದ ಮಾರುತಿ ಸ್ವಿಪ್ಟ ಡಿಸೈ‌ರ್ ಕಾರು ಹಾಗೂ ಎಕ್ಸೆಲ್ ಪ್ರೇಮ್ ಒಟ್ಟು 6,31,500. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.