


ಡೈಲಿ ವಾರ್ತೆ: 14/ಆಗಸ್ಟ್/ 2025


ವಿದ್ಯಾರಣ್ಯದ ಅಂಗಳದಲ್ಲಿ ʼಮುದ್ದು ಕೃಷ್ಣ ಸ್ಪರ್ಧೆʼ
ಕಾರ್ಯಕ್ರಮವನ್ನು ಉದ್ಘಾಟಿಸಲಿರುವ ʼಸು ಫ್ರಮ್ ಸೋʼ ರವಿಯಣ್ಣ

ಕುಂದಾಪುರ: ಶ್ರೀಕೃಷ್ಣ ಜನ್ಮಾಷ್ಟಮಿಯೆಂದರೆ ಸಾಕು ಹೆತ್ತವರ ಮೊಗದಲ್ಲಿ ಖುಷಿಯ ತೊಟ್ಟಿಲು ತೂಗುತ್ತದೆ. ಹೆತ್ತ ತಾಯಿ ತನ್ನ ಕರುಳಬಳ್ಳಿಯ ಕುಡಿಯಲ್ಲಿಯೇ ಕೃಷ್ಣನನ್ನು ಕಣ್ತುಂಬಿಸಿಕೊಳ್ಳುತ್ತಾಳೆ. ಹೌದು ಕೃಷ್ಣನೆಂದರೆ ಭಕ್ತಿ, ಪ್ರೇಮ, ನಿಷ್ಕಲ್ಮಶ ಸ್ನೇಹ ಹಾಗೇ ಮುದ್ದು ಮೊಗದ ಚೆಲುವ.ವಿಷ್ಣುವಿನ ಎಂಟನೇ ಅವತಾರನಾದ ಶ್ರೀ ಕೃಷ್ಣನ ವೇಷವನ್ನು ಪುಟ್ಟ ಮಕ್ಕಳಿಗೆ ಹಾಕಿ ಸಂಭ್ರಮಿಸುವುದೆಂದರೆ ತಾಯಂದಿರಿಗೆ ಬಲು ಪ್ರೀತಿ! ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಎಂದಿನಂತೆ ಈ ವರ್ಷ ಕೂಡ ಹಚ್ಚಹಸಿರಿನ ನಟ್ಟನಡುವೆ ಇರುವ ಸುಜ್ಞಾನ ಪದವಿ ಪೂರ್ವ ಕಾಲೇಜು ಹಾಗೂ ವಿದ್ಯಾರಣ್ಯ ಇಂಗ್ಲೀಷ್ ಮೀಡಿಯಂ ಸ್ಕೂಲ್ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಸಾರ್ವಜನಿಕರಿಗಾಗಿ ʼಮುದ್ದುಕೃಷ್ಣ ಸ್ಪರ್ಧೆʼ ಇದೇ ಭಾನುವಾರ (ಆಗಸ್ಟ್ 17) ಆಯೋಜಿಸಲಾಗಿದೆ. ಇತ್ತೀಚೆಗೆ ತೆರೆಕಂಡ ʼಸು ಫ್ರಮ್ ಸೋʼ ಸಿನಿಮಾದಲ್ಲಿನ ಅಭಿನಯದಿಂದ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಷ್ಟು ನಕ್ಕು ನಗಿಸುತ್ತಿರುವ ನಟ ರವಿಯಣ್ಣ (ಸನಿಲ್ ಗೌತಮ್) ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಇನ್ನು ಈ ಸ್ಪರ್ಧೆಯನ್ನು ಎರಡು ವಿಭಾಗದಲ್ಲಿ ನಡೆಸಲಾಗುತ್ತದೆ.
1)1 ವರ್ಷದಿಂದ 3 ವರ್ಷದ ವರೆಗಿನ ಮಕ್ಕಳಿಗೆ( ಜೂನಿಯರ್ಸ್)
2) 3 ವರ್ಷದಿಂದ 6 ವರ್ಷದ ವರೆಗಿನ ಮಕ್ಕಳಿಗೆ (ಸೀನಿಯರ್ಸ್)
ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಪ್ರತ್ಯೇಕ ಬಹುಮಾನ ನೀಡಲಾಗುವುದು.
ಪ್ರಥಮ ಬಹುಮಾನ: ರೂ.10,000,
ದ್ವಿತೀಯ ಬಹುಮಾನ: ರೂ.7,500 ಹಾಗೂ
ತೃತೀಯ ಬಹುಮಾನ: ರೂ.5,000 ರಂತೆ ಫಲಕ ಮತ್ತು ಪ್ರಮಾಣ ಪತ್ರದೊಂದಿಗೆ ಹಾಗೂ ಭಾಗವಹಿಸುವ ಪ್ರತಿ ಸ್ಪರ್ಧಿಗಳಿಗೂ ಸ್ಮರಣಿಕೆ ಹಾಗೂ ಪ್ರಶಂಸನಾ ಪತ್ರ ನೀಡಲಾಗುವುದು.
ಸ್ಪರ್ಧೆಯ ವಿಶೇಷ ಸೂಚನೆಗಳು:
- ಮಗುವಿನ ಜನನ ಪ್ರಮಾಣ ಪತ್ರದ ಪ್ರತಿಯನ್ನು ಸ್ಪರ್ಧೆಯ ದಿನ ನೋಂದಣಿ ವಿಭಾಗದಲ್ಲಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
- ಸ್ಪರ್ಧೆಯಲ್ಲಿ ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ.
ಆಸಕ್ತರು ದಿನಾಂಕ ಶುಕ್ರವಾರ(ಆಗಸ್ಟ್ 16)ದೊಳಗೆ ತಮ್ಮ ಮಗುವಿನ ಆಧಾರ ಕಾರ್ಡ್ ಮತ್ತು ಜನನ ಪ್ರಮಾಣ ಪತ್ರನ್ನು ಈ ಕೆಳಗಿನ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿದ ನಂತರ ನೋಂದಣಿ ಲಿಂಕ್ ಕಳುಹಿಸಲಾಗುವುದು.
88678 53401/9964291755