ಡೈಲಿ ವಾರ್ತೆ: 14/ಆಗಸ್ಟ್/ 2025

ರಾಷ್ಟ್ರೋತ್ಥಾನ ಪದವಿ ಪೂರ್ವ ಕಾಲೇಜು, ಚೇರ್ಕಾಡಿಯಲ್ಲಿ
ವೃತ್ತಿ ಮಾರ್ಗದರ್ಶನ ಮತ್ತು ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ

ಬ್ರಹ್ಮಾವರ: ರಾಷ್ಟ್ರೋತ್ಥಾನ ಪದವಿ ಪೂರ್ವ ಕಾಲೇಜು, ಚೇರ್ಕಾಡಿ ಬ್ರಹ್ಮಾವರ ಇಲ್ಲಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಮತ್ತು ವ್ಯಕ್ತಿತ್ವ ವಿಕಸನ ಉಪನ್ಯಾಸ ಕಾರ್ಯಕ್ರಮವು ಆ.14 ರಂದು ಗುರುವಾರ ನಡೆಯಿತು.

ಉಡುಪಿಯ ಪ್ರಸಿದ್ಧ ಲೆಕ್ಕ ಪರಿಶೋಧಕ ಸಿಎ ಪ್ರದೀಪ್ ಜೋಗಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಕನಸುಗಳನ್ನು ಹೊಂದಿರಬೇಕು ಆ ಕನಸನ್ನು ಈಡೇರಿಸಿಕೊಳ್ಳಲು ಸತತ ಪ್ರಯತ್ನ ಮಾಡಬೇಕು. ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಲೆಕ್ಕಪರಿಶೋಧಕ ಮತ್ತು ಕಂಪನಿ ಕಾರ್ಯದರ್ಶಿ ವಿಭಾಗದಲ್ಲಿ ಜಾಗತಿಕ ಮಟ್ಟದಲ್ಲಿ ವಿಫಲವಾದ ಉದ್ಯೋಗಾವಕಾಶಗಳಿವೆ. ಸಿಎ ಆಗುವುದು ಬಹಳ ಕಷ್ಟ, ಇದು ಅಸಾಧ್ಯ ಎಂದು ಅನೇಕ ವಿದ್ಯಾರ್ಥಿಗಳ ಮನಸ್ಸಿನಲ್ಲಿದೆ. ಕಠಿಣ ಪರಿಶ್ರಮ ಛಲವಿದ್ದರೆ ಇದನ್ನು ಸುಲಭವಾಗಿ ಗಳಿಸಬಹುದು. ಎಂದು ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡರು.

ವೇದಿಕೆಯಲ್ಲಿ ರಾಷ್ಟ್ರೋತ್ಥಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಭಾಗ್ಯಶ್ರೀ ಐತಾಳ್, ಆಡಳಿತ ಅಧಿಕಾರಿ ಸುರೇಶ್ ಹೆಜಮಾಡಿ ಉಪಸ್ಥಿತರಿದ್ದರು.

ವಾಣಿಜ್ಯ ವಿಭಾಗದ ಉಪನ್ಯಾಸಕಿ ಶ್ರೀಮತಿ ಪಲ್ಲವಿ ಕಾರ್ಯಕ್ರಮ ನಿರೂಪಿಸಿ, ಸಂಖ್ಯಾಶಾಸ್ತ್ರ ವಿಭಾಗದ ಉಪನ್ಯಾಸಕ ಶರತ್ ರಾವ್ ವಂದನಾರ್ಪಣೆಗೈದರು.