ಡೈಲಿ ವಾರ್ತೆ: 14/ಆಗಸ್ಟ್/ 2025

12 ವರ್ಷದ ಹಿಂದೆ ಧರ್ಮಸ್ಥಳದಿಂದ ಯುವತಿ ನಾಪತ್ತೆ ಪ್ರಕರಣ- ಸೋದರರಿಂದ ಪುಂಜಾಲಕಟ್ಟೆ ಠಾಣೆಯಲ್ಲಿ ದೂರು

ಮಂಗಳೂರು: ಬಂಟ್ವಾಳ ತಾಲೂಕಿನ ಕವಳಮುಡೂರು ಗ್ರಾಮದ ಹೇಮಾವತಿಯವರು 12 ವರ್ಷಗಳ ಹಿಂದೆ ಧರ್ಮಸ್ಥಳಕ್ಕೆ ತೆರಳಿದ್ದ ವೇಳೆ ಕಾಣೆಯಾಗಿದ್ದಾರೆ.
ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗದ ಕಾರಣ, ಅವರ ಅಣ್ಣ ನಿತಿನ್ ಅವರು ಆಗಸ್ಟ್ 14ರಂದು ಎಸ್ ಐಟಿ ಕಚೇರಿಗೆ ಭೇಟಿ ನೀಡಿ ದೂರು ದಾಖಲಿಸಿದರು.

ಇದೀಗ ಅರ್ಜಿದಾರರು ಪುಂಜಾಲಕಟ್ಟೆ ಪೊಲೀಸ್‌ ಠಾಣೆಯಲ್ಲಿ ನೀಡಿದ ದೂರರ್ಜಿಯನ್ನು ಸ್ವೀಕರಿಸಿಕೊಳ್ಳಲಾಗಿದ್ದು, ಮುಂದಿನ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.