



ಡೈಲಿ ವಾರ್ತೆ: 15/ಆಗಸ್ಟ್/ 2025


ಕೋಟ ಸಿಎ ಬ್ಯಾಂಕಿನ ಕಾರ್ಕಡ ಶಾಖೆಯಲ್ಲಿ 79ನೇ ಸ್ವಾತಂತ್ರೋತ್ಸವ ಸಂಭ್ರಮ

ಕೋಟ: 79ನೇ ಸ್ವಾತಂತ್ರ್ಯತ್ಸವದ ದಿನಾಚರಣೆಯ ಅಂಗವಾಗಿ ಕೋಟ ಸಿ.ಎ. ಬ್ಯಾಂಕ್ ಕಾರ್ಕಡ ಶಾಖೆಯಲ್ಲಿ ದ್ವಜಾರೋಹಣವನ್ನು ಶಾಖಾ ಸಭಾಪತಿ ಶ್ರೀಮತಿ ವಸಂತಿ ಅಚ್ಚುತ್ ಪೂಜಾರಿ ನೆರವೇರಿಸಿದರು.
ಶಾಖೆಯ ಪ್ರಭಂದಕರಾದ ಶೇಖರ್ ಗಿಳಿಯಾರ್ ಇವರು ಸ್ವಾಗತಿಸಿದರು. ಉದ್ಯಮಿ ಅಚ್ಚುತ್ ಪೂಜಾರಿ ಇವರು ಸ್ವಾತಂತ್ರಯೋಧರ ತ್ಯಾಗ ಬಲಿದಾನ ಬಗ್ಗೆ ನಾವು ನೀವೆಲ್ಲರೂ ಅರಿತು ಆ ಬಗ್ಗೆ ಯೋಚಿಸಿ ಬಾಳುವುದರ ಮೂಲಕ ಗೌರವಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಖೆಯ ಸಿಬ್ಬಂದಿ ವರ್ಗ, ಸಲಹಾಸಮಿತಿ ಸದಸ್ಯರು ಮತ್ತು ಸ್ಥಳೀಯರು ಉಪಸ್ಥಿತರಿದ್ದು.
ಸಲಹಸಮಿತಿ ಸದಸ್ಯ ನರಸಿಂಹ ದೇವಾಡಿಗ ನೆಲ್ಲಿಬೆಟ್ಟು ಧನ್ಯವಾದ ಸಮರ್ಪಿಸಿದರು. ರಾಷ್ಟ್ರಗೀತೆ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.