



ಡೈಲಿ ವಾರ್ತೆ: 15/ಆಗಸ್ಟ್/ 2025

ಆಲದಪದವು ನೂರುಲ್ ಇಸ್ಲಾಂ ಮದರಸ ಮತ್ತು ಮಸ್ಜಿದ್ ವತಿಯಿಂದ
79ನೇ ಸ್ವಾತಂತ್ರ್ಯೋತ್ಸವ ಆಚರಣೆ

ಬಂಟ್ವಾಳ : ಆಲದಪದವು ನೂರುಲ್ ಇಸ್ಲಾಂ ಮದರಸ ಮತ್ತು ಮಸ್ಜಿದ್ ವತಿಯಿಂದ
79ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಹಿರಿಯರಾದ ಪುತ್ತುಮೋನು ಬಸ್ತಿಕೋಡಿ ಧ್ವಜರೋಹಣ ನೆರವೇರಿಸಿದರು. ಮಸೀದಿ ಅಧ್ಯಕ್ಷ ಅನಿತಾ ದರ್ಬಾರ್ ಹಂಝ ಬಸ್ತಿಕೋಡಿ ಅಧ್ಯಕ್ಷತೆ ವಹಿಸಿದ್ದರು.
ಸ್ಥಳೀಯ ಮಸೀದಿ ಇಮಾಮ್ ಅಬೂಬಕ್ಕರ್ ಸಿದ್ದೀಕ್ ಮಹ್ದಾನಿ ಶುಭ ಹಾರೈಸಿದರು.
ಮಸೀದಿ ಉಪಾಧ್ಯಕ್ಷ ಸಿರಾಜ್ ಬಸ್ತಿಕೋಡಿ, ಕೊಶಾಧಿಕಾರಿ ಇಮ್ರಾನ್ ಬಸ್ತಿಕೋಡಿ, ಹಾಜಿ ಅಬ್ದುಲ್ ರಹಿಮಾನ್, ಬಸೀರ್ ಪಾಲ್ಕೆ, ಅಬ್ಬು ನಡಾಯಿ ಜಮಾಅತರು, ಮದ್ರಸ ವಿದ್ಯಾರ್ಥಿಗಳು ಭಾಗವಹಿಸಿದ್ದರು .