



ಡೈಲಿ ವಾರ್ತೆ: 15/ಆಗಸ್ಟ್/ 2025


SDPI ಕಾಟಿಪಳ್ಳ 3ನೇ ವಾರ್ಡ್ ಸಮಿತಿವತಿಯಿಂದ 79ನೇ ಸ್ವಾತಂತ್ರ್ಯೋತ್ಸವ ಆಚರಣೆ

ಕಾಟಿಪಳ್ಳ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾಟಿಪಳ್ಳ 3ನೇ ವಾರ್ಡ್ ಸಮಿತಿ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವು ಕಾಟಿಪಳ್ಳ ಶಂಶುದ್ದೀನ್ ಸರ್ಕಲ್ ಬಳಿ SDPI 3ನೇ ವಾರ್ಡ್ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ದ್ವಜಾರೋಹಣ ಮಾಡಿ ಸ್ವಾತಂತ್ರ್ಯ ಸಂದೇಶವನ್ನು ನೀಡಿದರು. ಈ ಸಂಧರ್ಭದಲ್ಲಿ SDPI ಮಂಗಳೂರು ಉತ್ತರ ಕ್ಷೇತ್ರ ಜೊತೆ ಕಾರ್ಯದರ್ಶಿ ಫಯಾಝ್ ಕಾಟಿಪಳ್ಳ ,ಕಾರ್ಯದರ್ಶಿ ಝ್ಯನುದ್ದಿನ್ ಕಾಟಿಪಳ್ಳ,
ಇಬ್ರಾಹಿಂ ಕಾಟಿಪಳ್ಳ,
ಕಾಟಿಪಳ್ಳ ಮುಸ್ಲಿಂ ಜಮಾತ್ ಇದರ ಅಧ್ಯಕ್ಷರು ಅಬ್ದುಲ್ ಖಾಯ್ಯುಮ್ ಅತಿಥಿ ಭಾಷಣ ನೆರವೇರಿಸಿದರು,
ತೌಕೀರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.