



ಡೈಲಿ ವಾರ್ತೆ: 15/ಆಗಸ್ಟ್/ 2025


ಅಂಗನವಾಡಿ ಮುದ್ದು ಮಕ್ಕಳೊಂದಿಗೆ 79ನೇ ಸ್ವಾತಂತ್ರ್ಯೋತ್ಸವ ಆಚರಿಸಿದ ಕೋಟ ಜೀವನ್ ಮಿತ್ರ ಸೇವಾ ಟ್ರಸ್ಟ್ – ಸಂಸದ ಕೋಟ ಅವರಿಂದ ಮಕ್ಕಳಿಗೆ ಕಿಟ್ ಹಸ್ತಾಂತರ

ಕೋಟ: ಜೀವನ್ ಮಿತ್ರ ಸೇವಾ ಟ್ರಸ್ಟ್ (ರಿ)ಕೋಟ ಇದರ ವತಿಯಿಂದ 79ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು
ಕೋಟ ಶಿವರಾಮ ಕಾರಂತ್ ಥೀಮ್ ಪಾರ್ಕ್ ನಲ್ಲಿ ಅಂಗನವಾಡಿ ಮುದ್ದು ಮಕ್ಕಳೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು.

79ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಅಂಗನವಾಡಿ ಮಕ್ಕಳಿಗೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರಿಂದ ಜೀವನ್ ಮಿತ್ರ ಕಿಟ್ ಹಸ್ತಾಂತರಿಸಿ ಮಕ್ಕಳಿಗೆ ಶುಭಕೋರಿದರು.


ಈ ಸಂದರ್ಭದಲ್ಲಿ ಶ್ಯಾಮ್ ಸುಂದರ್ ನಾಯರಿ ಸಾಲಿಗ್ರಾಮ, ರೋಟರಿ ಕ್ಲಬ್ ಅಧ್ಯಕ್ಷರು ಪ್ರಕಾಶ್ ಹಂದಟ್ಟು, ಚಂದ್ರ ಮೆಂಡನ್ , ಸತೀಶ್ ಪೂಜಾರಿ ಜಯಕರ್ನಾಟಕ ಸಾಲಿಗ್ರಾಮ, ಕ್ರಷ್ಣ ಪೂಜಾರಿ ಕೋಡಿ ಪಂಚಾಯತ್ ಸದಸ್ಯರು, ಪ್ರದೀಪ್ ಪಡುಕೆರೆ ಕೋಟ ಗ್ರಾಮ ಪಂಚಾಯತ್ ಸದಸ್ಯರು, ವಸಂತ್ ಸುವರ್ಣ ಕೋಟ, ಗೋಪಾಲ್ ಕೃಷ್ಣ ಕುಂಬಾಷಿ, ಧನುಷ್ ವಡ್ಡರ್ಸಿ, ಜೀವನ್ ಕದ್ರಿಕಟ್,ಕಿಶೋರ್ ಶೆಟ್ಟಿ ಚಿತ್ರಪಾಡಿ,ಜಗನಾಥ್ ಅಮೀನ್ ಸಾಲಿಗ್ರಾಮ, ಶ್ರೀನಿವಾಸ್ ಅಮೀನ್ ಪಡುಕೆರೆ,ಜಯಲಕ್ಷ್ಮಿ ಅಂಗನವಾಡಿ ಸಹಾಯಕಿ, ಶೈಲಜಾ ಕೋಟ, ಹಾಗೂ ಇತರ ಸಿಬ್ಬಂದಿ ಅವರು,ನಾಗೇಂದ್ರ ಪುತ್ರನ್ ಕೋಟ ಹಾಗೂ ನಾಗರಾಜ್ ಪುತ್ರನ್ ಕೋಟ ಉಪಸ್ಥಿತಿ ಅಲ್ಲಿ ಕಾರ್ಯಕ್ರಮ ಸಂಭ್ರಮ ದಿಂದ ನಡೆಯಿತು.