



ಡೈಲಿ ವಾರ್ತೆ: 15/ಆಗಸ್ಟ್/ 2025


ಕುಂದಾಪುರ|ಮುಹಿಯುದ್ದೀನ್ ಜುಮಾ ಮಸ್ಜಿದ್ ಕೋಡಿಯಲ್ಲಿ ಸಂಭ್ರಮದ 79ನೇ ಸ್ವಾತಂತ್ರ್ಯ ದಿನಾಚರಣೆ

ಕುಂದಾಪುರ| ಮುಹಿಯುದ್ದೀನ್ ಜುಮಾ ಮಸ್ಜಿದ್ ಕೋಡಿ, ಕುಂದಾಪುರದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಪ್ರಸ್ತುತ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಸೀದಿಯ ಅಧ್ಯಕ್ಷರಾದ ದುಲ್ ಫುಕಾರ್ ವಹಿಸಿದ್ದರು.
ಮುಹಿಯುದ್ದೀನ್ ಜುಮಾ ಮಸ್ಜಿದ್ ಜಮಾಅತ್ ಬಾಂಧವರು, ಕಂಝುಲ್ ಉಲೂಂ ದರ್ಸ್ ವಿದ್ಯಾರ್ಥಿಗಳು, ಹಯಾತುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳು, ದಾರು ಸ್ಸಿಬಿಯಾನ್ ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.
ದುಆದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡು , ಜಮಾಅತ್ ಅಧ್ಯಕ್ಷರು, ಕಾರ್ಯದರ್ಶಿ ರಿಯಾಝ್ ಪ್ರತಿಜ್ಞೆಯನ್ನು ಪಠಿಸಿದರು. ಮುದರ್ರಿಸ್ ರಾಶಿದ್ ಕಾಮಿಲ್ ಸಖಾಫಿ ಅಳಕೆಮಜಲು ರವರು ಮಾತಾಡಿ ಭಾರತ ದೇಶಕ್ಕೆ ಮುಸಲ್ಮಾನರ ಕೊಡುಗೆಯನ್ನು ವಿವರಿಸಿದರು. ಸ್ವಾತಂತ್ರ್ಯಕ್ಕೆ ಬೇಕಾಗಿ ಹೇಗೆ ಒಗ್ಗಟ್ಟಾಗಿ ಹೋರಾಡಿದ್ದೇವೋ ಅದೇ ರೀತಿ ನಾವು ಎಂದಿಗೂ ಒಗ್ಗಟ್ಟಿನಲ್ಲಿ ಇದ್ದರೆ ಮಾತ್ರ ಭಾರತದ ಅಭಿವೃದ್ಧಿ ಸಾಧ್ಯ ಎಂದು ವಿವರಿಸಿದರು.
ಕೆಸಿಎಫ್ ಗಲ್ಫ್ ಪ್ರತಿನಿಧಿಯಾಗಿ ಇರ್ಫಾನ್ ಜಿಶಾನ್ ರವರು ಮಾತಾಡಿದರು. ಕಾರ್ಯಕ್ರಮದಲ್ಲಿ ಖತೀಬ್ ಉಸ್ತಾದ್ ಯೂಸುಫ್ ಸಖಾಫಿ, ಮದ್ರಸ ಉಸ್ತಾದರು ಅಶ್ರಫ್ ಮುಸ್ಲಿಯಾರ್, ಅಸ್ಗರ್ ಮದನಿ ಉಪಸ್ಥಿತರಿದ್ದರು. ಕೊನೆಯಾದಾಗಿ ಸದರ್ ಉಸ್ತಾದ್ ನಾಸಿರ್ ಹಿಶಾಮಿ ಧನ್ಯವಾದ ಹೇಳಿದರು.