ಡೈಲಿ ವಾರ್ತೆ: 16/ಆಗಸ್ಟ್/ 2025

ಜೋಗಿಬೆಟ್ಟು: ಐಎಂಸಿ ವತಿಯಿಂದ ಪುರಸ್ಕಾರ ಸಮಾರಂಭ

ಬಂಟ್ವಾಳ : ಗಡಿಯಾರ ಸಮೀಪದ ಜೋಗಿಬೆಟ್ಟುವಿನ ಐ.ಎಂ.ಸಿ ಸಂಘಟನೆಯ ನೇತೃತ್ವದಲ್ಲಿ 2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಸ್ಥಳೀಯ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭವು ಶುಕ್ರವಾರ ಗಡಿಯಾರ ಜುಮಾ‌ ಮಸೀದಿ ಆವರಣದಲ್ಲಿ ‌ನಡೆಯಿತು.

ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾದ ದುಲ್ಖತ್ಹುಲ್ ಅಫೀಫಾ (ಅಂಕ 617), ಮುಹಮ್ಮದ್ ಶಬೀರ್ ಕೆ (ಅಂಕ 590), ಮುಹಮ್ಮದ್ ರಾಫಿ (ಅಂಕ 566), ಮುಹಮ್ಮದ್ ನಿಹಾಲ್ (ಅಂಕ 560), ಮರಿಯಂ ರಾಯಿದ್ (ಅಂಕ 549) ಇವರನ್ನು ಸನ್ಮಾನಿಸಲಾಯಿತು.

ಐ.ಎಂ.ಸಿ ಸಂಘಟನೆಯ ಅಧ್ಯಕ್ಷ ಹಾರಿಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗಡಿಯಾರ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ರಿಯಾಝ್ ಕಲ್ಲಾಜೆ, ಖತೀಬ್ ಮುಹಮ್ಮದಲಿ ದಾರಿಮಿ, ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಗಡಿಯಾರ್, ರಶೀದ್ ಸಖಾಫಿ, ಸಿರಾಜುದ್ದೀನ್ ಮದನಿ, ಪಿ.ಕೆ., ಪತ್ರಕರ್ತ ಶಂಶೀರ್ ಬುಡೋಳಿ‌, ಬಶೀರ್ ಕರಾಯ, ರಿಯಾಝ್ ವಿದ್ಯಾನಗರ ಮೊದಲಾದವರು ಭಾಗವಹಿಸಿದ್ದರು.